ಉದ್ಯಾವರ ಸಾವಿರ ಜಮಾಯತ್ ವಾರ್ಷಿಕ ಹರಕೆ 18ರಿಂದ
ಮಂಜೇಶ್ವರ: ಉತ್ತರ ಕೇರಳದ ಪುರಾತನವಾದ ಮಂಜೇಶ್ವರ ಉದ್ಯಾವರ ಸಾವಿರ ಜಮಾಯತ್ ಅಸ್ಸೈಯಿದ್ ಶಹೀದ್ ವಲಿಯುಲ್ಲಾಹಿ ದರ್ಗಾ ಶರೀಫ್ ಹಾಗೂ ಹರಕೆ ಈ ತಿಂಗಳ 18ರಿಂದ 21ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕುಂಬಳೆಯಲ್ಲಿ ಪದಾಧಿಕಾರಿಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
18ರಂದು ಬೆಳಿಗ್ಗೆ 10 ಗಂಟೆಗೆ ದರ್ಗಾ ಶರೀಫ್ ಸಿಯಾರತ್ನೊಂದಿಗೆ ಧ್ವಜಾರೋಹಣ ನಡೆಸಲಾಗುವುದು. ರಾತ್ರಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಸಾವಿರ ಜಮಾಯತ್ನ ಅಧ್ಯಕ್ಷ ಯು.ಕೆ. ಸೈಫುಲ್ಲ ಬುಖಾರಿ ತಂಙಳ್ರ ಅಧ್ಯಕ್ಷತೆಯಲ್ಲಿ ಸಯ್ಯೀದ್ ಸೈನುಲ್ ಆಬಿದಿನ್ ಜಿಫ್ರಿ ತಂಙಳ್ ಉದ್ಘಾಟಿಸುವರು. ಕೀಚೇರಿ ಅಬ್ದುಲ್ ಗಫೂರ್ ಮೌಲವಿ ಪ್ರಧಾನ ಭಾಷಣ ನಡೆಸುವರು. ಪಂಡಿತರಾದ ಪೇರೋಡ್ ಮುಹಮ್ಮದ್ ಅಸ್ಸಹರಿ ಮುಹಿ ಯುದ್ದೀನ್ ಹುದವಿ ಆಲುವ, ಕೂಟಂಬಾರ ಅಬ್ದುಲ್ ರೆಹಮಾನ್ ದಾರಿಮಿ ಮೊದಲಾದವರು ವಿವಿಧ ದಿನಗಳಲ್ಲಿ ಧಾರ್ಮಿಕ ಪ್ರವಚನ ನೀಡುವರು.ಪೂಕುಂಞಿ ತಂಙಳ್ರ ಅಧ್ಯ ಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಸ್ತ ಕೇರಳ ಜಂಇಯ ತುಲ್ ಉಲಮ ಅಧ್ಯಕ್ಷ, ಉದ್ಯಾವರ ಸಾವಿರ ಜಮಾಯತ್ ಜಂಟಿ ಖಾಸಿ ಯಾಗಿರುವ ಸಯ್ಯೀದುಲ್ ಉಲಮ ಅಸ್ಸಯೀದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿ ಸುವರು. ಕಾರ್ಯಕ್ರಮಗಳಲ್ಲಿ ವಿವಿಧ ವಲಯದ ಹಲವು ಮಂದಿ ಗಣ್ಯರು ಭಾಗವಹಿಸುವರು. ಈ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಮಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್, ದರ್ಗಾ ಸಮಿತಿ ಅಧ್ಯಕ್ಷ ಪೂಕುಂಞಿ ತಂಙಳ್, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ, ಪಳ್ಳಿಕುಂಞಿ ಹಾಜಿ, ಅಹಮ್ಮದ್ ಬಾವ ಹಾಜಿ, ಆಲಿಕುಟ್ಟಿ ಮೊದಲಾದವರು ಭಾಗವಹಿಸಿದರು