ಉದ್ಯೋಗಕ್ಕಾಗಿ ನೀಡಿದ ಹಣ ವಂಚನೆ: ಮನನೊಂದ ಗೃಹಿಣಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಬದಿಯಡ್ಕ: ಗೃಹಿಣಿಯೊಬ್ಬರು ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಳ್ಳತ್ತಡ್ಕ ಬಳಿಯ ನೆಲ್ಲಿಕಳಯ ನಿವಾಸಿ ಅರವಿಂದಾಕ್ಷನ್ ಎಂಬವರ ಪತ್ನಿ ಸರೋಜಿನಿ (50) ಮೃತ ಪಟ್ಟ ಮಹಿಳೆ. ಸರೋಜಿನಿಯ ಪುತ್ರಿಗೆ ಉದ್ಯೋಗ ದೊರಕಿಸುವುದಾಗಿ ಭರವಸೆ ಯೊಡ್ಡಿ ಡಿವೈಎಫ್‌ಐ ಮಾಜಿ ನೇತಾರೆ ಶೇಣಿ ಬಲ್ತಕಲ್ಲುವಿನ ಸಚಿತಾ ರೈ 12.77 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿ ದ್ದಳೆನ್ನಲಾಗಿದೆ. ಸರೋಜಿನಿಯ ಚಿನ್ನಾ ಭರಣವನ್ನು ಅಡವಿರಿಸಿ ಇಷ್ಟು ಮೊತ್ತ ಸಂಗ್ರಹಿಸಿ ಸಚಿತಾ ರೈಗೆ ನೀಡಿರುವುದಾಗಿ ಹೇಳಲಾಗುತ್ತಿದೆ. ಆದರೆ ಇದೀಗ ಹಣ ಮರಳಿ ಲಭಿಸದ ವ್ಯಥೆಯಿಂದ ಸರೋಜಿನಿ ಆತ್ಮಹತ್ಯೆಗೈದಿರುವುದಾಗಿ ಸಂಶಯಿಸಲಾಗುತ್ತಿದೆ.
ಮೃತರು ಪತಿ, ಮಕ್ಕಳಾದ ಅಮೃತ, ಅನಿತ, ಅನೀಶ, ಅಳಿಯ ವಿಜಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.