ಉದ್ಯೋಗಕ್ಕಾಗಿ ಶಾರ್ಜಾಕ್ಕೆ ಹೋದ ಯುವಕ ಹೃದಯಾಘಾತದಿಂದ ನಿಧನ
ಕಾಸರಗೋಡು: ಉದ್ಯೋಗ ನಿಮಿತ್ತ ಎರಡು ವಾರಗಳ ಹಿಂದೆ ಯಷ್ಟೇ ಶಾರ್ಜಾಕ್ಕೆ ಹೋದ ಯುವಕ ಹೃದಯಾಘಾತದಿಂದ ಮೃತಪಟ್ಟನು. ೧೮ನೇ ಮೈಲು ಪೂದಂಪಾರ ಎಂಬಲ್ಲಿನ ಜೋನ್ಸನ್ ಎಂಬವರ ಪುತ್ರ ರಿಬಿನ್ ಜೋನ್ಸನ್ (22) ಮೃತಪಟ್ಟ ದುರ್ದೈವಿ. ಪಾಣತ್ತೂರಿನಲ್ಲಿ ಇಲೆಕ್ಟ್ರಿಕಲ್ ಸಾಮಗ್ರಿಗಳ ಅಂಗಡಿ ನಡೆಸುತ್ತಿದ್ದ ರಿಬಿನ್ ಎರಡು ವಾರಗಳ ಹಿಂದೆಯಷ್ಟೇ ಶಾರ್ಜಾಕ್ಕೆ ತೆರಳಿದ್ದರು. ಅಲ್ಲಿನ ವಾಸ ಸ್ಥಳದಲ್ಲಿ ಎದೆನೋವು ಕಾಣಿಸಿಕೊಂಡ ಇವರನ್ನು ಆಸ್ಪತ್ರೆ ಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿ ತ್ಸೆ ಫಲಕಾರಿಯಾಗದೆ ಮೃತಪಟ್ಟಿರುವು ದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ.
ಮೃತನು ತಂದೆ, ತಾಯಿ ಬಿಂದು, ಸಹೋದರಿ ರಿಯಾ (ಯು.ಕೆ) ಹಾ ಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.