ಉದ್ಯೋಗ ಭರವಸೆಯೊಡ್ಡಿ ಇನ್ನಷ್ಟು ಮಂದಿಗೆ ವಂಚನೆ : ಮಾಜಿ ಡಿವೈಎಫ್‌ಐ ನೇತಾರೆ ಸಚಿತಾ ರೈ ವಿರುದ್ಧ ಮತ್ತೆ ಮೂರು ಕೇಸು
ಕಾಸರ ಗೋಡು: ಕೇಂದ್ರ ಹಾಗೂ ರಾಜ್ಯ ಸರಕಾರಿ ಸಂಸ್ಥೆ ಗಳಲ್ಲಿ ಉದ್ಯೋಗದ ಭರವಸೆಯೊಡ್ಡಿ ಮಾಜಿ ಡಿವೈಎಫ್‌ಐ ನೇತಾರೆ, ಶೇಣಿ ಬಲ್ತಕಲ್ಲುವಿನ ಸಚಿತಾ ರೈ (27) ಇನ್ನಷ್ಟು ಮಂದಿಯಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿರುವುದಾಗಿ ಆರೋಪ ಕೇಳಿ ಬಂದಿದೆ. ಸಚಿತಾ ರೈ ವಿರುದ್ಧ ಮತ್ತೆ ಮೂರು ಮಂದಿ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇದರಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇದರೊಂದಿಗೆ ಸಚಿತಾ ರೈ ವಿರುದ್ಧ ಕೇರಳ ಹಾಗೂ ಕರ್ನಾಟಕದಲ್ಲಾಗಿ ದಾಖಲಾ ದ ಕೇಸುಗಳ ಸಂಖ್ಯೆ 19ಕ್ಕೇರಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪೆರು ವಾಜೆ ನಿವಾಸಿ ಪಿ. ರೇಣುಕಾ, ಎಣ್ಮಕಜೆ ಪಂ.ನ ವಾಣಿನಗರ ಪಾಲೆಪ್ಪಾಡಿ ನಿವಾಸಿ ಪಿ. ಸತೀಶ, ವಾಣಿನಗರದ ರಾಜೇಶ್ ಎಂಬಿವರು ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕರ್ನಾಟಕದ ಅಬಕಾರಿ ಇಲಾಖೆಯಲ್ಲಿ ತಿಂಗಳಿಗೆ 80 ಸಾವಿರ ರೂಪಾಯಿ ವೇತನವುಳ್ಳ ಉದ್ಯೋಗ ದೊರಕಿಸಿಕೊಡುವುದಾಗಿ ತಿಳಿಸಿ 29 ಲಕ್ಷ ರೂಪಾಯಿಗಳನ್ನು ಪಡೆದು ಸಚಿತಾ ರೈ ವಂಚಿಸಿರುವುದಾಗಿ ರೇಣುಕಾ ದೂರಿದ್ದಾರೆ. ಬ್ಯಾಂಕ್ ಮೂಲಕವೂ, ನೇರವಾಗಿಯೂ ಈ ಹಣ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಅದೇ ರೀತಿ ಕಾಸರಗೋಡು ಸಿಪಿಸಿಆರ್‌ಐಯಲ್ಲಿ ಚಾಲಕನ ಕೆಲಸ ದೊರಕಿಸಿಕೊಡುವುದಾಗಿ ನಂಬಿಸಿ ಪಾಲೆಪ್ಪಾಡಿಯ ಪಿ. ಸತೀಶರ ಕೈಯಿಂದ 5 ಲಕ್ಷ ರೂಪಾಯಿ ಪಡೆದಿರು ವುದಾಗಿ ದೂರಲಾಗಿದೆ. ಅದೇ ರೀತಿ ಕಾಸರ ಗೋಡು ಸಿಪಿಸಿಆರ್‌ಐಯಲ್ಲಿ ಉದ್ಯೋಗ ದೊರಕಿಸುವುದಾಗಿ ತಿಳಿಸಿ ವಾಣಿನಗರದ ರಾಜೇಶ್‌ರಿಂದ ಸಚಿತಾ ರೈ ೨.೮೦ ಲಕ್ಷ ರೂ. ಪಡೆದಿರುವುದಾಗಿ ದೂರಲಾಗಿದೆ. ಕುಂಬಳೆ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ಸೆರೆಗೀಡಾದ ಸಚಿತಾ ಈಗ ರಿಮಾಂಡ್‌ನಲ್ಲಿದ್ದಾಳೆ.