ಉದ್ಯೋಗ ಭರವಸೆಯೊಡ್ಡಿ ಯುವತಿಯಿಂದ 15 ಲಕ್ಷ ರೂ. ಪಡೆದು ವಂಚನೆ: ಮಾಜಿ ಡಿವೈಎಫ್‌ಐ ನೇತಾರೆಯಾದ ಅಧ್ಯಾಪಿಕೆ ವಿರುದ್ಧ ಕೇಸು ದಾಖಲು
ಕುಂಬಳೆ: ಸಿಪಿಸಿಆರ್‌ಐ ಯಲ್ಲಿ ಉದ್ಯೋಗ ದೊರಕಿ ಸಿಕೊಡುವುದಾಗಿ ಭರವಸೆ ಯೊಡ್ಡಿ ಯುವತಿಯಿಂದ 15,05,796 ರೂಪಾಯಿ ಪಡೆದು ವಂಚಿಸಿದ ಬಗ್ಗೆ ಆರೋಪವುಂಟಾಗಿದೆ.
ಕಿದೂರು ಪದಕ್ಕಲ್ ಹೌಸ್‌ನ ನಿಶ್ಮಿತ ಶೆಟ್ಟಿ (24) ನೀಡಿದ ದೂರಿನಂತೆ ಶೇಣಿ ಬಲ್ತಕಲ್ಲು ನಿವಾಸಿ ಸಚಿತಾ ರೈ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಪ್ರಸ್ತುತ ಬಾಡೂರು ಎಎಲ್‌ಪಿ ಶಾಲೆಯಲ್ಲಿ ಅಧ್ಯಾಪಿಕೆಯಾದ ಸಚಿತಾ ರೈ ಮಾಜಿ ಡಿವೈಎಫ್‌ಐ ಬ್ಲೋಕ್ ಕಮಿಟಿ ಸದಸ್ಯೆ, ಬಾಲ ಸಂಘ ಜಿಲ್ಲಾ ಸಮಿತಿ ಸದಸ್ಯೆ ಯಾಗಿಯೂ ಕಾರ್ಯಾಚರಿದ್ದಳು.
ಸಿಪಿಸಿಆರ್‌ಐಯಲ್ಲಿ ಉದ್ಯೋ ಗ ದೊರಕಿಸಿಕೊಡುವುದಾಗಿ ಭರವಸೆಯೊಡ್ಡಿ 2023 ಮೇ 31ರಿಂದ 2023 ಅಗೋಸ್ತ್ 25ರ ವರೆಗಿನ ದಿನಗಳಲ್ಲಿ ಹಲವು ಬಾರಿಯಾಗಿ ತನ್ನಿಂದ 15,05,796 ರೂಪಾಯಿ ಪಡೆದು ವಂಚಿಸಿರುವುದಾಗಿಯೂ ನಿಶ್ಮಿತಾ ಶೆಟ್ಟಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಹಲವು ಬಾರಿ ವಿಚಾರಿ ಸಿದರೂ ಉದ್ಯೋಗ ಲಭಿಸಿಲ್ಲ. ಇದರಿಂದ ಹಣ ಮರಳಿ ಕೇಳಿದರೂ ನೀಡಲು ಹಿಂಜರಿದಿ ರುವುದಾಗಿ ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿಲಾಗಿದೆ. ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮುಂ ದಿನ ದಿನಗಳಲ್ಲಿ ಇನ್ನಷ್ಟು ದೂರುಗಳು ಲಭಿಸುವ ಸಾಧ್ಯತೆ ಇದೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ.