ಉದ್ಯೋಗ ಭರವಸೆಯೊಡ್ಡಿ ಲಕ್ಷಾಂತರ ರೂ.ಗಳ ವಂಚನೆ
ಕಾಸರಗೋಡು: ಕೇಂದ್ರ-ರಾಜ್ಯ ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸುವುದಾಗಿ ಭರವಸೆಯೊಡ್ಡಿ ಹಲವರಿಂದ ಲಕ್ಷಾಂತರ ರೂಪಾಯಿ ಗಳನ್ನು ಪಡೆದು ವಂಚಿಸಿ ತಲೆಮರೆಸಿ ಕೊಂಡಿರುವ ಶೇಣಿ ಬಲ್ತಕಲ್ಲು ನಿವಾಸಿ ಸಚಿತಾ ರೈ (27) ವಿರುದ್ಧ ಬದಿಯಡ್ಕ ಪೊಲೀಸರು ಇನ್ನೊಂದು ಕೇಸು ದಾಖಲಿಸಿಕೊಂಡಿದ್ದಾರೆ. ಪಳ್ಳತ್ತಡ್ಕ ಉಕ್ಕಿನಡ್ಕ ಬಳಿಯ ಬಳ್ಳಂಬೆಟ್ಟುವಿನ ಶ್ವೇತ ಕುಮಾರಿ ನೀಡಿದ ದೂರಿನಂತೆ ಈ ಕೇಸು ದಾಖಲಿಸಲಾಗಿದೆ. ಕೇಂದ್ರೀಯ ವಿದ್ಯಾಲಯದಲ್ಲಿ ಉದ್ಯೋಗ ದೊರಕಿಸುವುದಾಗಿ ತಿಳಿಸಿ ಸೆಪ್ಟಂಬರ್ ೨೫ರಂದು ಎರಡೂವರೆ ಲಕ್ಷರೂಪಾ ಯಿ ಪಡೆದು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಸಚಿತಾ ರೈ ವಿರುದ್ಧ ದಾಖಲಿಸಿಕೊಳ್ಳಲಾದ ಕೇಸುಗಳ ಸಂಖ್ಯೆ ೮ಕ್ಕೇರಿದೆ. ಡಿವೈಎಫ್‌ಐ ಮಾಜಿ ಜಿಲ್ಲಾ ಸಮಿತಿ ಸದಸ್ಯೆಯಾಗಿದ್ದ ಸಚಿತಾ ರೈ ಬಾಡೂರು ಎಎಲ್‌ಪಿ ಶಾಲೆ ಅಧ್ಯಾಪಿಕೆಯಾಗಿ ದ್ದಾಳೆ. ವಂಚನೆ ಪ್ರಕರಣಗಳಲ್ಲಿ ಕೇಸು ದಾಖಲಿಸುವುದರೊಂದಿಗೆ ಈಕೆ ತಲೆಮರೆಸಿಕೊಂಡಿದ್ದಾಳೆ. ಎರ್ನಾಕುಳಂ ನಲ್ಲಿ ತಲೆಮರೆಸಿಕೊಂ ಡಿದ್ದ ಸಚಿತಾ ಪ್ರಸ್ತುತ ಕರ್ನಾಟಕದ ಉಡುಪಿಯ ಗುಪ್ತ ಕೇಂದ್ರವೊಂದರಲ್ಲಿರುವುದಾಗಿ ಸೂಚನೆ ಲಭಿಸಿದೆ. ಈ ವಿಷಯವನ್ನು ಕೇರಳ ಪೊಲೀಸರು ಕರ್ನಾಟಕ ಪೊಲೀಸರಿಗೆ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲೂ ಸಚಿತಾ ವಿರುದ್ಧ ವಂಚನೆ ಕೇಸು ದಾಖಲಿಸ ಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಕೂಡಾ ತನಿಖೆ ನಡೆಸುತ್ತಿದ್ದಾರೆ. ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ಬಳಿಕವೂ ಸಚಿತಾಳನ್ನು ಬಂಧಿಸದಿರು ವುದು ಸಾರ್ವಜನಿಕರೆ ಡೆಯಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ. ರಾಜಕೀ ಯದ ಬೆಂಬಲವಿರುವುದರಿಂದ ಪೊಲೀ ಸರು ಈಕೆಯನ್ನು ಸೆರೆಹಿಡಿಯಲು ಆಸಕ್ತಿ ವಹಿಸುತ್ತಿಲ್ಲವೆಂದು ಆರೋ ಪವುಂಟಾಗಿದೆ. ಇದೇ ವೇಳೆ ಸಚಿತಾ ರೈಯನ್ನು ಪತ್ತೆಹಚ್ಚಲು ಕಾಸರಗೋಡು ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ತಂಡವನ್ನು ರೂಪೀಕರಿಸಲಾಗಿದೆ. ಕುಂಬಳೆ ಠಾಣೆ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಮಂಜೇಶ್ವರ, ಬದಿಯಡ್ಕ ಎಸ್‌ಐಗಳು ಈ ಪ್ರತ್ಯೇಕ ತಂಡದಲ್ಲಿದ್ದಾರೆ. ಪೊಲೀಸರು ಶೇಣಿ ಬಲ್ತಕಲ್ಲುವಿನ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದರೂ ಸಚಿತಾಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆದ ಸ್ಥಿತಿಯಲ್ಲಿದೆಯೆಂದು ಪೊಲೀಸರು ತಿಳಿಸಿದ್ದಾರೆ.