ಉದ್ಯೋಗ ಭರವಸೆಯೊಡ್ಡಿ ವಂಚನೆ: ಸಚಿತಾ ರೈ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತ
ಕಾಸರಗೋಡು: ಸರಕಾರಿ ಕಚೇರಿ ಗಳಲ್ಲಿ ಉದ್ಯೋಗ ದೊರಕಿಸಿಕೊಡುವು ದಾಗಿ ಭರವಸೆಯೊಡ್ಡಿ ಹಲವರಿಂದ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಶೇಣಿ ಬಲ್ತಕಲ್ಲು ನಿವಾಸಿ ಸಚಿತಾ ರೈ (27) ನೀಡಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕಾಸರಗೋಡು ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಲಯ ತಿರಸ್ಕರಿಸಿದೆ.
ಬಾಡೂರು ಎಎಲ್‌ಪಿ ಶಾಲೆಯ ಅಧ್ಯಾಪಿಕೆಯೂ, ಡಿವೈಎಫ್‌ಐ ಮಾಜಿ ನೇತಾರೆಯಾದ ಸಚಿತಾ ರೈ ಕೇಂದ್ರ ತೋಟ ಬೆಳೆ ಸಂಶೋಧನಾ ಸಂಸ್ಥೆ (ಸಿಪಿಸಿಆರ್‌ಐ) ಸಹಿತ ವಿವಿಧ ಸರಕಾರಿ ಕಚೇರಿಗಳಲ್ಲಿ ಉದ್ಯೋಗ ಭರವಸೆಯೊಡ್ಡಿ ಹಲವರಿಂದ ಹಣ ಪಡೆದು ವಂಚಿಸಿರುವುದಾಗಿ ದೂರಲಾಗಿದೆ. ದಾಖಲುಗೊಂಡಿರುವ ಪ್ರಕರಣಗಳ ಗಂಭೀರತೆಯನ್ನು ಪರಿಗಣಿಸಿ ಹಾಗೂ ರಾಜ್ಯದಲ್ಲೂ, ಹೊರ ರಾಜ್ಯದಲ್ಲಿರುವ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲುಗೊಂಡಿರುವ ಹಿನ್ನೆಲೆಯಲ್ಲಿ ಸಚಿತಾ ರೈಯ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ.
ಕಿದೂರು ಪದಕ್ಕಲ್‌ನ ನಿಶ್ಮಿತ ಶೆಟ್ಟಿಯ ದೂರಿನಂತೆ ಕುಂಬಳೆ ಪೊಲೀಸರು ಮೊದಲು ಕೇಸು ದಾಖಲಿಸಿಕೊಂಡಿದ್ದರು. ಅನಂತರ ಹಲವರು ಪೊಲೀಸ್ ಠಾಣೆಗಳಿಗೆ ತಲುಪಿ ಸಚಿತಾ ರೈ ವಿರುದ್ಧ ವಂಚನೆ ದೂರು ನೀಡಿದ್ದಾರೆ.
ಪ್ರಸ್ತುತ ಸಚಿತಾ ರೈ ವಿರುದ್ಧ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಮೂರು ಕೇಸು, ಮಂಜೇಶ್ವರದಲ್ಲಿ ೧, ಕುಂಬಳೆಯಲ್ಲಿ ೧, ದ.ಕ. ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಒಂದು ಕೇಸು ದಾಖಲಿಸಲಾಗಿದೆ.
ಕೇಸುಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಚಿತಾ ರೈ ನಿರೀಕ್ಷಣಾ ಜಾಮೀನು ಅರ್ಜಿಯೊಂದಿಗೆ ನ್ಯಾಯಾ ಲಯವನ್ನು ಸಮೀಪಿಸಿದ್ದಳು. ವಂಚನೆಗೆ ಸಂಬಂಧಿಸಿ ಸಚಿತಾ ರೈ ವಿರುದ್ಧ ಕೇಸು ದಾಖಲಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ಸಿಪಿಎಂನಿಂದ ಹೊರಹಾಕಲಾಗಿದೆ.