ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾದ ನವಜಾತ ಶಿಶುವನ್ನು ತನಗೆ ನೀಡುವಂತೆ ಯುವತಿ ಆಗ್ರಹ
ಅಡೂರು: ಪಂಜಿಕಲ್ ನ ಶಾಲೆ ಯೊಂದರ ವರಾಂಡದಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾದ ಮಗು ಮತ್ತು ಮಗುವಿನ ತಾಯಿಯೆಂದು ಹೇಳಲಾಗುತ್ತಿರುವ ಯುವತಿಯನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ. ಇದೇ ಸಂದರ್ಭದಲ್ಲಿ ಆ ಮಗು ತನ್ನದೆಂದೂ ಅದು ತನಗೆ ಬಿಟ್ಟುಕೊಡಬೇಕೆಂಬ ಬೇಡಿಕೆ ಯನ್ನು ಯುವತಿ ಮುಂದಿರಿಸಿದ್ದು, ಆದರೆ ಕಾನೂನುಪ್ರಕಾರ ಆ ಮಗುವನ್ನು ಸದ್ಯ ಆಕೆಗೆ ನೀಡು ವಂತಿಲ್ಲವೆಂದು ಶಿಶು ಸಂರಕ್ಷಣಾ ಸಮಿತಿ ಅಧಿಕಾರಿಗಳು ಸ್ಪಷ್ಟಪಡಿಸಿ ದ್ದಾರೆ. ಪತ್ತೆಯಾದ ಮಗು ಮತ್ತು ತಾಯಿಯೆಂದು ಹೇಳಲಾಗುತ್ತಿರುವ ಯುವತಿಯ ಡಿಎನ್ಎ ಪರೀಕ್ಷೆ ನಡೆಸಿದ ಬಳಿಕವಷ್ಟೇ ಈ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವೆಂದು ಸಮಿತಿ ಅಧಿಕಾರಿಗಳು ತಿಳಿಸಿದ್ದಾರೆ.