ಉಪ್ಪಳದಲ್ಲಿ ಭರದಿಂದ ನಡೆಯುತ್ತಿರುವ ಫ್ಲೈಓವರ್ ಕಾಮಗಾರಿ: ವಾಹನಗಳ ದಟ್ಟಣೆಯಿಂದ ಸಮಸ್ಯೆ ಸೃಷ್ಟಿ
ಉಪ್ಪಳ: ರಾಷ್ಟಿçÃಯ ಹೆದ್ದಾರಿ ಅಭಿವೃದ್ದಿ ಕಾಮಗಾರಿ ಭರದಿಂದ ನಡೆಯುತ್ತಿರುವಂತೆ ಉಪ್ಪಳ ಪೇಟೆಯಲ್ಲಿ ಫ್ಲೆöÊಓವರ್ ನಿರ್ಮಾಣ ಕೆಲಸವೂ ಅತೀ ವೇಗದಿಂದ ಸಾಗುತ್ತಿದೆ. ಈಗಾಗಲೇ ಒಂದು ಭಾಗದ ಪಿಲ್ಲರ್ಗಳ ಕಾಮಗಾರಿ ಪೂರ್ತಿಗೊಂಡಿದ್ದು, ಭೀಮ್ ಅಳವಡಿಸಲಾಗಿದೆ. ಇನ್ನೊಂದು ಭಾಗದ ಪಿಲ್ಲರ್ ನಿರ್ಮಾಣ ಅಂತದಲ್ಲಿದ್ದು, ಭೀಮ್ ಅಳವಡಿಸುವ ಕೆಲಸಗಳ ತಯಾರಿ ನಡೆಯುತ್ತಿದೆ. ಆದರೆ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆ ಕಿರಿದಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಕೆಲವು ವಾಹನಗಳನ್ನು ಸರ್ವೀಸ್ ರಸ್ತೆ ಬದಿಯಲ್ಲಿಯೇ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವುದು ಸಮಸ್ಯೆ ಬಿಗಡಾಯಿಸಲು ಕಾರಣವಾಗುತ್ತಿದೆ. ವಾಹನಗಳ ದಟ್ಟಣೆಯಿಂದ ಬಸ್ಗಳಿಗೆ ನಿಗದಿತ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಇದರಿಂದ ಚಾಲಕರು ಹಾಗೂ ಪ್ರಯÁಣಿಕರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಕಾಮಗಾರಿಯಿಂದಾಗಿ ಉಪ್ಪಳ ಬಸ್ ನಿಲ್ದಾಣದೊಳಗೆ ಕೆಲವು ಖಾಸಗಿ ಬಸ್ಗಳು ಮಾತ್ರ ಪ್ರವೇಶಿಸುತ್ತಿದೆ. ಇದರಿಂದ ನಿಲ್ದಾಣದೊಳಗಿರುವ ವ್ಯಾಪಾರಿಗಳು ವ್ಯಾಪಾರವಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ಫ್ಲೆöÊ ಓವರ್ ಕಾಮಗಾರಿಯನ್ನು ಶೀಘ್ರ ಪೂರ್ತಿಗೊಳಿಸಿದರೆ ಸಮಸ್ಯೆಗಳಿಗೆ ಮುಕ್ತಿ ಲಭಿಸಬಹುದೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.