ಉಪ್ಪಳದಲ್ಲಿ ಮಾದಕದ್ರವ್ಯ ಪತ್ತೆ ಪ್ರಕರಣ: ವಶಪಡಿಸಿದುದಕ್ಕಿಂತಲೂ ಇಮ್ಮಡಿ ಎಂಡಿಎಂಎಸಾಗಾಟ ಮಾಹಿತಿ ತನಿಖಾ ತಂಡಕ್ಕೆ ಲಭ್ಯ

ಉಪ್ಪಳ: ಉಪ್ಪಳಕ್ಕೆ ಸಮೀಪದ ಮುಳಿಂಜ ಪತ್ವಾಡಿಯ ಮನೆಯಲ್ಲಿ ಈ ತಿಂಗಳ 20ರಂದು 3.407 ಕಿಲೋ ಎಂಡಿಎಂಎ ಮೊದಲಾದ ಬೃಹತ್ ಪ್ರಮಾಣದ ಮಾದಕದ್ರವ್ಯ ಪತ್ತೆಯಾದ ಬಗ್ಗೆ ಪೊಲೀಸರು ನಡೆಸಿದ ಮುಂದಿನ ತನಿಖೆಯಲ್ಲಿ ಈ ಪ್ರದೇಶದಲ್ಲಿ ವಶ ಪಡಿಸಿದುದಕ್ಕಿಂತಲೂ ಇಮ್ಮಡಿಗಿಂ ತಲೂ ಅಧಿಕ ಮಾದಕದ್ರವ್ಯ  ಬಂದು ಸೇರಿದೆಯೆಂಬ ಅತೀ ನಿರ್ಣಾಯಕ ಮಾಹಿತಿ ಲಭಿಸಿದೆ.

ಪತ್ವಾಡಿಯಲ್ಲಿ 3.407 ಕಿಲೋ ಎಂಡಿಎಂಎ, 642.65 ಗ್ರಾಂ ಗಾಂಜಾ, 96.65 ಗ್ರಾಂ ಕೊಕೈನ್ ಮತ್ತು 30 ಮಾದಕಮಾತ್ರೆಗಳನ್ನು ಪೊಲೀಸರು ಪತ್ತೆಹಚ್ಚಿದ್ದರು. ಇದಕ್ಕೆ ಸಂಬಂಧಿಸಿ ಮಾಲನ್ನು ಬಚ್ಚಿಟ್ಟಿದ್ದ ಪತ್ವಾಡಿ ಆಲ್ ಫಲಾಹ್ ಮಂಜಿಲ್‌ನ ಅಸ್ಕರ್ ಅಲಿ (26)ನನ್ನು ಪೊಲೀಸರು ಬಂಧಿಸಿದ್ದರು. ಆತನನ್ನು ತೀವ್ರ ವಿಚಾರಣೆಗೊಳ ಪಡಿಸಿದಾಗ ವಶಪಡಿಸಿದುದಕ್ಕಿಂತಲೂ ಇಮ್ಮಡಿ ಮಾದಕದ್ರವ್ಯ ಉಪ್ಪಳಕ್ಕೆ ಬಂದು ಸೇರಿದ ಬಗ್ಗೆ ಮಾಹಿತಿ ಲಭಿಸಿದೆ. ಮಾತ್ರವಲ್ಲ ಈ ಮಾದಕ ದ್ರವ್ಯ ದಂಧೆಯಲ್ಲಿ ಉಪ್ಪಳ ಪರಿಸರದ ಇನ್ನೂ ಹಲವರು ಒಳಗೊಂಡಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಅಂತಹವರ ಮೇಲೆ ಪೊಲೀಸರು ತೀವ್ರ ನಿಗಾ ಇರಿಸತೊಡಗಿದ್ದಾರೆ.

ಮಾದಕದ್ರವ್ಯ ಮಾರಾಟ ವ್ಯವಹಾರಕ್ಕಾಗಿ ಈ ಜಾಲದವರು ಪ್ರತ್ಯೇಕ  ಮೊಬೈಲ್ ಆಪ್‌ನ್ನು ತಯಾರಿ ಸಿದ್ದಾರೆಂಬ ಮಾಹಿತಿಯೂ ಪೊಲೀ ಸರಿಗೆ ಲಭಿಸಿದೆ. ಮಾದಕದ್ರವ್ಯ ಅಗತ್ಯ ವಿರುವವರು ಈ ಆಪ್ ಮೂಲಕ ಸಂಪರ್ಕಿಸುತ್ತಾರೆ. ಇದಕ್ಕಿರುವ ಹಣವನ್ನು ಗ್ರಾಹಕರು ಗೂಗಲ್ ಪೇ ಮಾಡುತ್ತಿದ್ದರೆಂಬ ಮಾಹಿತಿಯೂ ಲಭಿಸಿ ದೆಯೆಂದು ತನಿಖಾ ತಂಡ ತಿಳಿಸಿದೆ.

ಇದೇ ಸಂದರ್ಭದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಅಸ್ಕರ್ ಅಲಿಯ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕುವ ಕ್ರಮದಲ್ಲೂ ಪೊಲೀಸರು ತೊಡಗಿದ್ದಾರೆ.  ಇದೇ ಮಾದಕದ್ರವ್ಯ ದಂಧೆಯ ಕುಣಿಕೆಯಲ್ಲಿ ಸಿಲುಕಿದ ಇಬ್ಬರು ಗಲ್ಫ್‌ನಲ್ಲಿ ಜೈಲು ಸೇರಿರುವ ಬಗ್ಗೆಯೂ  ಪೊಲೀಸರಿಗೆ ಮಾಹಿತಿ ಲಭಿಸಿದೆ.

ಹಿದಾಯತ್ ನಗರ ನಿವಾಸಿಯಾ ಗಿರುವ  ಯುವಕನೋರ್ವ ಒಂದು ತಿಂಗಳ ಹಿಂದೆ ಗಲ್ಫ್‌ಗೆ ಹೋಗುವ ವೇಳೆ ಆತನ ಕೈಯಲ್ಲಿ   ಓರ್ವರಿಗೆ ತಲುಪಿಸಲೆಂದು ನೀಡಲಾಗಿದ್ದ ಉಪ್ಪಿನಕಾಯಿ ಪಾತ್ರೆಯಲ್ಲಿ  ಆತನಿಗೆ ತಿಳಿಯದೆ ಬಚ್ಚಿಟ್ಟಿದ್ದ ಎಂಡಿಎಂಎ ಯನ್ನು ಗಲ್ಫ್ ವಿಮಾನ ನಿಲ್ದಾಣದ ಅಧಿಕಾರಿಗಳು ವಶಪಡಿಸಿಕೊಂಡು ಅದಕ್ಕೆ ಸಂಬಂಧಿಸಿ  ಆ ಯುವಕ ನನ್ನು  ಬಂಧಿಸಿ  ಜೈಲಿಗಟ್ಟಲಾಗಿತ್ತು. ಆಗಲಷ್ಟೇ ತಾನು ವಂಚನೆಗೊಳ ಗಾಗಿದ್ದ ಅರಿವು ಆ ಯುವಕನಿಗೆ ಉಂಟಾಗಿತ್ತು. ಇದರ ಹೊರತಾಗಿ ಉಪ್ಪಳ ನಿವಾಸಿಯಾದ ಯುವಕ ನೋರ್ವನೂ ಇದೇ ಜಾಲದ ಕುಣಿಕೆಗೆ ಸಿಲುಕಿ ಎರಡು ದಿನಗಳ ಹಿಂದೆ ಖತ್ತರ್‌ನಲ್ಲಿ ಬಂಧಿತನಾಗಿ ಸೆರೆಮನೆ ಸೇರಿದ ಮಾಹಿತಿ ಪೊಲೀಸರಿಗೆ ಲಭಿಸಿದೆ. ಉಪ್ಪಳ ಕೇಂದ್ರೀಕರಿಸಿ ಭಾರೀ ದೊಡ್ಡ ಮಾದಕದ್ರವ್ಯ ಸಾಗಾಟ ತಂಡ ಕಾರ್ಯವೆಸಗುತ್ತಿದೆಯೆಂದೂ ಈ ತಂಡದ ಬಲೆಗೆ ಇನ್ನೂ ಹಲವರು ಯುವಕರು ಸಿಲುಕಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಲಭಿಸಿದೆ. ಮಾತ್ರವಲ್ಲ ಆ ಬಗ್ಗೆಯೂ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page