ಉಪ್ಪಳ ಫ್ಲಾಟ್‌ನಲ್ಲಿ ಮೃತಪಟ್ಟ ವ್ಯಕ್ತಿ ಆನೆಕಲ್ಲು ನಿವಾಸಿ
ಉಪ್ಪಳ: ಉಪ್ಪಳ ಬಸ್ ನಿಲ್ದಾಣ ಬಳಿಯ ಫ್ಲಾಟ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ಆನೆಕಲ್ಲು ಬಳಿಯ ನಿವಾಸಿಯೆಂದು ಗುರುತು ಹಚ್ಚಲಾಗಿದೆ. ಆನೆಕಲ್ಲು ಕದಿನಮೂ ಲೆಯ ಇಬ್ರಾಹಿಂ ಎಂಬವರ ಪುತ್ರ ಶೇಕ್ ಅಬ್ದುಲ್ ಖಾದರ್ (48) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ಗಲ್ಫ್ ಉದ್ಯೋಗಿಯಾಗಿದ್ದ ಇವರು ಬಳಿಕ ಊರಿಗೆ ತಲುಪಿ ಕುಟುಂಬದೊಂದಿಗೆ ಉಪ್ಪಳದ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು.
ಈ ತಿಂಗಳ 18ರಂದು ಬೆಳಿಗ್ಗೆ ಪತ್ನಿ ಮಕ್ಕಳ ಸಹಿತ ತಾಯಿ ಮನೆಗೆ ತೆರಳಿದ್ದರು. ಶೇಕ್ ಅಬ್ದುಲ್ ಖಾದರ್ ಇಬ್ರಾಹಿಂ ಮಾತ್ರವೇ ಫ್ಲಾಟ್‌ನಲ್ಲಿದ್ದರು. 19ರಂದು ಪತ್ನಿಗೆ ಫೋನ್ ಕರೆ ಮಾಡಿ ಇವರು ಮಾತನಾಡಿದ್ದರು. ಅನಂತರ ಪತ್ನಿ ಕರೆಮಾಡಿದರೂ ಪತಿ ಫೋನ್ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ನಿನ್ನೆ ಬೆಳಿಗ್ಗೆ ಮಕ್ಕಳು ಫ್ಲಾಟ್‌ಗೆ ತಲುಪಿ ನೋಡಿದಾಗ ಶೇಕ್ ಅಬ್ದುಲ್ ಖಾದರ್ ಇಬ್ರಾಹಿಂ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹ ಜೀರ್ಣಗೊಂಡ ಸ್ಥಿತಿಯ ಲ್ಲಿತ್ತು. ಹೃದಯ ಸಂಬಂಧ ಅಸೌಖ್ಯ ವೂ ಇವರಿಗೆ ಬಾಧಿಸಿತ್ತೆನ್ನಲಾಗಿದೆ. ಅಸೌಖ್ಯದಿಂದ ಇವರು ಮೃತಪಟ್ಟಿರ ಬಹುದೆಂದು ಅಂದಾಜಿಸಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ಮಂಗಲ್ಪಾಡಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ನಡೆಸಲಾಯಿತು. ಮರಣೋತ್ತರ ಪರೀಕ್ಷಾ ವರದಿ ಲಭಿಸಿದ ಬಳಿಕವೇ ಸಾವಿಗೆ ಕಾರ ಣವೇನೆಂದು ತಿಳಿಯಬಹುದೆಂದು ಪೊಲೀಸರು ತಿಳಿಸಿದ್ದಾರೆ.
ಮೃತರು ತಾಯಿ ನಫೀಸ, ಪತ್ನಿ ಬುಶ್ರಾ, ಮೂವರು ಮಕ್ಕಳ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.