ಉಪ್ಪಳ ಬಸ್ ನಿಲ್ದಾಣದ ಶೌಚಾಲಯ ದುರಸ್ತಿ ಕೆಲಸಗಳು ಆರಂಭ
ಉಪ್ಪಳ: ಉಪ್ಪಳ ಬಸ್ ನಿಲ್ದಾಣದಲ್ಲಿ ಕಾರ್ಯಾಚರಿಸುವ ಶೌಚಾಲಯದಲ್ಲಿ ದುರಸ್ತಿ ಹಾಗೂ ಅಭಿವೃದ್ಧಿ ಕೆಲಸಗಳು ಆರಂಭಗೊಂಡಿದೆ. ವಾರ್ಡ್ ಸದಸ್ಯ ಶರೀಫ್ ನೇತೃತ್ವದಲ್ಲಿ ಆರಂಭಿಸಲಾ ಗಿದೆ. ಈ ಹಿನ್ನೆಲೆಯಲ್ಲಿ ಒಂದು ವಾರ ತನಕ ಶೌಚಾಲಯ ಮುಚ್ಚುಗಡೆ ಗೊಳ್ಳಲಿದೆ. ಮಂಗಲ್ಪಾಡಿ ಪಂಚಾಯತ್ ಹಾಗೂ ಶುಚಿತ್ವ ಮಿಷನ್ ಜಂಟಿಯಾಗಿ ಸುಮಾರು ೩ ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಹಾಗೂ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದಾಗಿ ವಾರ್ಡ್ ಸದಸ್ಯ ತಿಳಿಸಿದ್ದಾರೆ. ಉಪ್ಪಳ ಪೇಟೆಯಲ್ಲಿ ವ್ಯವಸ್ಥಿತವಾದ ಶೌಚಾಲಯವಿಲ್ಲದೆ ಸಾರ್ವಜನಿಕರು ಸಮಸ್ಯೆಗೀಡಾಗುತ್ತಿದ್ದಾರೆ. ದಿನನಿತ್ಯ ಸಾವಿರಾರು ಮಂದಿ ತಲುಪುವ ಪೇಟೆಯಲ್ಲಿ ಸುಸಜ್ಜಿತವಾದ ಸೌಕರ್ಯಗಳನ್ನು ಹೊಂದಿರುವ ಶೌಚಾಲಯವನ್ನು ನಿರ್ಮಿಸಬೇ ಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.