ಉಪ್ಪಳ ಬಸ್ ನಿಲ್ದಾಣ ಪ್ರವೇಶ ರಸ್ತೆ ಡಾಮರೀಕರಣಕ್ಕೆ ಒತ್ತಾಯ
ಉಪ್ಪಳ: ಉಪ್ಪಳ ಬಸ್ ನಿಲ್ದಾಣ ಪ್ರವೇಶಿಸುವಲ್ಲಿ ಜಲ್ಲಿ ಕಲ್ಲುಗಳು ಹರಡಿಕೊಂಡಿದ್ದು, ಬಸ್ ಸಹಿತ ವಾಹನ ಸಂಚಾರದ ವೇಳೆ ಟಯರ್‌ಗೆ ಸಿಲುಕಿ ಜನರ ಮೇಲೆ ಎಸೆಯಲ್ಪಡುತ್ತಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ಕೂಡಲೇ ಡಾಮಾರೀಕರಣಗೊಳಿಸಿ ದುರಸ್ತಿಗೊಳಿಸಲು ಒತ್ತಾಯಿಸಿದ್ದಾರೆ. ರಾಷ್ಟಿçÃಯ ಹೆದ್ದಾರಿ ಅಭಿವೃದ್ದಿ ಹಿನ್ನೆಲೆಯಲ್ಲಿ ನಿಲ್ದಾಣ ಪರಿಸರದಿಂದ ಸರ್ವೀಸ್ ರಸ್ತೆ ನಿರ್ಮಿಸಲಾಗಿದೆ. ಈ ವೇಳೆ ಬಸ್ ನಿಲ್ದಾಣ ಪ್ರವೇಶಿಸುವಲ್ಲಿ ಹೊಂಡ ಗುಂಡಿಗಳಿಗೆ ಜಲ್ಲಿಕಲ್ಲು ಗಳನ್ನು ಮಾತ್ರ ಹಾಕಿಡಲಾಗಿದೆ. ಡಾಮಾರು ಹಾಕದ ಹಿನ್ನೆಲೆಯಲ್ಲಿ ನಿಲ್ದಾಣದೊಳಗೆ ಬಸ್ ಸಹಿತ ಇತರ ವಾಹಗಳು ಪ್ರವೇಶಿಸುವ ವೇಳೆ ಜಲ್ಲಿಕಲ್ಲುಗಳು ಟಯರ್‌ಗೆ ಸಿಲುಕಿ ಸಾರ್ವಜನಿಕರಿಗೆ ಹಾಗೂ ಪರಿಸರದ ವ್ಯಾಪಾರ ಸಂಸ್ಥೆಗಳಿಗೆ ಎಸೆಯಲ್ಪಡುತ್ತಿರುವುದಾಗಿ ದೂರಲಾಗಿದೆ. ಸಂಬAಧಪಟ್ಟ ಅಧಿಕಾರಿಗಳು ಕೂಡಲೇ ಡಾಮಾರು ಹಾಕಿ ಸಮತಟ್ಟುಗೊಳಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.