ಉಪ್ಪಳ ರೈಲ್ವೇ ಗೇಟ್ ಒಂದು ವಾರ ಮುಚ್ಚುಗಡೆ: ಮುಸೋಡಿ ಸಹಿತ ಪರಿಸರ ಪ್ರದೇಶದ ಜನರಿಗೆ ತೀವ್ರಗೊಂಡ ಸಮಸ್ಯೆ
ಉಪ್ಪಳ: ಉಪ್ಪಳ ರೈಲ್ವೇ ಗೇಟ್ ಪರಿಸರದಲ್ಲಿ ಇಂಟರ್ ಲಾಕ್ ಅಳವಡಿಸುವ ಕಾಮಗಾರಿ ಹಾಗೂ ಸರ್ವೀಸ್ ರಸ್ತೆ ಕಾಮಗಾರಿಯ ಹಿನ್ನೆಲೆಯಲ್ಲಿ ಒಂದು ವಾರ ತನಕ ಇಲ್ಲಿನ ರೈಲ್ವೇ ಗೇಟ್‌ನ್ನು ಮುಚ್ಚುಗಡೆಗೊಳಿಸಲಾಗುತ್ತಿದ್ದು, ಇದರಿಂದ ಮೂಸೋಡಿ, ಶಾರದಾನಗರ, ಮಣಿಮುಂಡ ಸಹಿತ ಪರಿಸರದ ಸಮುದ್ರ ತೀರದ ಜನರ ಸುಗಮ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗಿದೆ. ನಿನ್ನೆಯಿಂದ ಗೇಟ್ ಮುಚ್ಚುಗಡೆಗೊಳಿಸಿ ಇಂಟರ್ ಲಾಕ್ ಅಳವಡಿಸುವ ಕೆಲಸವನ್ನು ಆರಂಭಿಸಲಾಗಿದೆ. ಒಂದು ವಾರ ಮುಚ್ಚುಗಡೆಗೊಳಿಸಲಾಗುವುದಾಗಿ ತಿಳಿದುಬಂದಿದೆ. ಮಣಿಮುಂಡ ಹಾಗೂ ಮೂಸೋಡಿಯಿಂದಾಗಿ ರೈಲ್ವೇ ಅಂಡರ್ ಪಾಸ್ ಮೂಲಕ ತಾತ್ಕಾಲಿಕ ರಸ್ತೆಯಲ್ಲಿ ತೀರ ಪ್ರದೇಶದ ಜನರು ಸಂಚಾರ ನಡೆಸುತ್ತಿದ್ದಾರೆ. ಆದರೆ ಈ ರಸ್ತೆಯಲ್ಲಿ ಲಘು ವಾಹನಗಳು ಮಾತ್ರವೇ ಸಂಚರಿಸಬಹುದೆAದು ಸ್ಥಳೀಯರು ತಿಳಿಸಿದ್ದಾರೆ. ಈ ಪ್ರದೇಶದ ಜನರಿಗೆ ಹೆದ್ದಾರಿ ಪ್ರವೇಶಿಸಲು ಉಪ್ಪಳಗೇಟ್ ಮೂಲಕವೇ ರಸ್ತೆಯಾಗಿದೆ. ಅಧಿಕಾರಿಗಳು ಶೀಘ್ರವೇ ಕಾಮಗಾರಿ ಮುಗಿಸಿ ಗೇಟ್‌ನ್ನು ತೆರೆದು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.