ಉಪ್ಪಳ ಶ್ರೀ ಅಯ್ಯಪ್ಪ ಮಂದಿರದಲ್ಲಿ ಶ್ರೀ ಅಯ್ಯಪ್ಪ ದೀಪೋತ್ಸವ ೩೦ರಂದು
ಉಪ್ಪಳ: ಉಪ್ಪಳ ಶ್ರೀ ಅಯ್ಯಪ್ಪ ಮಂದಿರದಲ್ಲಿ 52ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ ಈ ತಿಂಗಳ 30ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಪೂರ್ವಾಹ್ನ 5ಕ್ಕೆ ಗಣಪತಿ ಹೋಮ, ಬೆಳಿಗ್ಗೆ 6.30ಕ್ಕೆ ಹರಿನಾಮ ಕೀರ್ತನೆ, 8ರಿಂದ ಭಜನೆ ಸಂಕೀರ್ತನೆ, 10.30ಕ್ಕೆ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ, ಮಧ್ಯಾಹ್ನ 12 ಮಹಾಪೂಜೆ, 12.30ರಿಂದ ಅನ್ನಸಂತರ್ಪಣೆ, ಸಂಜೆ 4ರಿಂದ ಕುಣಿತ ಭಜನೆ, 6ರಿಂದ ಪಾಲೆಕೊಂಬು ಮೆರವಣಿಗೆ ಅಂಬಾರು ಶ್ರೀ ಸದಾಶಿವ ಕ್ಷೇತ್ರದಿಂದ ಉತ್ಸವಾಂಗಣಕ್ಕೆ, ರಾತ್ರಿ ನೃತ್ಯ ಸಂಗಮ, 8ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು.
ಬ್ರಹ್ಮಶ್ರೀ ಮಲ್ಲಪಳ್ಳಿ ಕೃಷ್ಣನ್ ನಂಬೂದಿರಿ, ರವೀಂದ್ರ ಶೆಟ್ಟಿ ಉಳಿದೊಟ್ಟು ಅಧ್ಯಕ್ಷತೆ ವಹಿಸುವರು. ಉದ್ಯಮಿ ಪಿ.ಆರ್.ಶೆಟ್ಟಿ ಕುಳೂರು, ಕರ್ನಾಟಕ ಸರಕಾರ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕÀ ಕ್ಯಾ| ಗಣೇಶ್ ಕಾರ್ನಿಕ್, ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಸೇವಾರತ್ನ ಯು.ಎಂ ಭಾಸ್ಕರ ರವರನ್ನು ಗೌರವಿಸ ಲಾಗುವುದು.
ರಾತ್ರಿ 11ರಿಂದ ಶಬರಿಮಲೆ ಸ್ವಾಮಿ ಅಯ್ಯಪ್ಪ ಪೌರಾಣಿಕ ಯಕ್ಷಗಾನ ಪ್ರದರ್ಶನ, 12.30ರಿಂದ ದೀಪಾರಾಧನೆ, ತಾಯಂ ಬಕ, 3ರಿಂದ ಶ್ರೀ ಅಯ್ಯಪ್ಪನ್ ಗೀತೆ, 3.45ರಿಂದ ಹಣತೆ ದೀಪ ಮೆರವಣಿಗೆ, ಪ್ರಾತಕಾಲ 5ರಿಂದ ಅಗ್ನಿಪೂಜೆ, 5.30ರಿಂದ ಶ್ರೀ ಅಯ್ಯಪ್ಪನ್ ಮತ್ತು ವಾವರ ಯುದ್ದ ಕಾರ್ಯಕ್ರಮಗಳು ನಡೆಯಲಿದೆ.