ಉಪ್ಪಳ ಹೈಯರ್ ಸೆಕೆಂಡರಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ ನಾಳೆ
ಉಪ್ಪಳ: ಕಿಫ್‌ಬಿ ನಿಧಿಯಡಿ ಯಲ್ಲಿ ಉಪ್ಪಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಹೊಸದಾಗಿ ನಿರ್ಮಿಸಲಾದ ಕಟ್ಟಡದ ಉದ್ಘಾಟನೆ ನಾಳೆ ಬೆಳಿಗ್ಗೆ 10.15ಕ್ಕೆ ಶಿಕ್ಷಣ ಮತ್ತು ಉದ್ಯೋಗ ಸಚಿವ ವಿ. ಶಿವನ್ ಕುಟ್ಟಿ ನಿರ್ವಹಿಸಲಿರುವರು. ಹೊಸ ಕಟ್ಟಡ ವನ್ನು ಸರ್ಕಾರದ ಸಾರ್ವಜನಿಕ ವಿದ್ಯಾಭ್ಯಾಸ ಸಂರಕ್ಷಣಾಯಜ್ಞ ಮತ್ತು ವಿದ್ಯಾಕಿರಣಂ ಯೋಜನೆಗಳ ಅಡಿ ಯಲ್ಲಿ ನಿರ್ಮಿಸಲಾಗಿದೆ. ಒಂದು ಕೋಟಿ ಮೂವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ಆರು ತರಗತಿ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಸರಗೋಡು ಲೋಕಸಭಾ ಸದಸ್ಯ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜಿಲ್ಲಾ ಪಂಚಾ ಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ ಇಂಬಶೇಖರ್ ಉಪಸ್ಥಿತರಿರುವರು. ಎಲ್.ಐ.ಡಿ ಕಾರ್ಯ ನಿರ್ವಾಹಕ ಇಂಜಿನಿಯರ್ ಶೈನಿ ಎಂ ವರದಿ ಮಂಡಿಸುವರು. ಪ್ರಭಾರ ಪ್ರಾಂಶುಪಾಲ ವಿ. ಮಾಯಾ ವರದಿ ಮಂಡಿಸುವರು. ಜಿಲ್ಲಾ ಪಂಚಾಯತ್ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಿತಾ ಎಸ್.ಎನ್, ಸದಸ್ಯ ಗೋಲ್ಡನ್ ಅಬ್ದುರಹ್ಮಾನ್, ಮಂಜೇಶ್ವರA ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಹನೀಫ್ ಪಿ.ಕೆ, ಮಂಗಲ್ಪಾಡಿ ಪಂಚಾಯತ್ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್, ಡಿಡಿಇ ಮಧುಸೂಧನನ್ ಟಿ.ವಿ, ಆರ್.ಡಿ.ಡಿ-ಎಚ್.ಎಸ್.ಇ ರಾಜೇಶ್ ಕುಮಾರ್ ಆರ್, ಡಿ.ಇ.ಒ ದಿನೇಶ ವಿ, ಮಂಜೇಶ್ವರ ಎ.ಇ.ಒ ರಾಜಗೋಪಾಲ್, ಮಂಜೇಶ್ವರ ಬಿಪಿಸಿ ಜಾಯ್ ವಿ, ಅಶ್ವಿನಿ ಎಂ.ಎಲ್, ರಮೇಶನ್, ರಾಘವ ಚೇರಾಲ್, ರಾಮಕೃಷ್ಣ ಕಡಂಬಾರ್, ಅಸೀಸ್ ಮರಿಕೆ ಕುಳಾಯಿ, ಕೆ.ಎಸ್. ಫಕ್ರುದ್ದೀನ್, ಸಿದ್ದಿಕ್ ಕೈಕಂಬ, ಅಬ್ದುಲ್ ಲತೀಫ್, ಪಿಟಿಎ ಅಧ್ಯಕ್ಷ ಅಶ್ರಫ್, ಪಿಟಿಎ ಉಪಾಧ್ಯಕ್ಷ ಇಸ್ಮಾಯಿಲ್, ಮುಹಮ್ಮದ್ ಉಪ್ಪಳ ಗೇಟ್, ಶಶಿಕಲಾ ಟೀಚರ್, ಹಸೀನಾ, ರವೀಂದ್ರ ಎನ್, ಖದೀಜತ್ ಶಹಲಾ, ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ಭಾಗವಹಿಸಲಿದ್ದಾರೆ.