ಉಬ್ರಂಗಳ ಶ್ರೀ ಐವರು ವಿಷ್ಣುಮೂರ್ತಿ ದೈವಸ್ಥಾನ ಬ್ರಹ್ಮಕಲಶೋತ್ಸವ: ಸಮಿತಿ ರೂಪೀಕರಣ

ಬದಿಯಡ್ಕ: ಉಬ್ರಂಗಳ ಶ್ರೀ ಐವರು ವಿಷ್ಣುಮೂರ್ತಿ ಚಾಮುಂಡಿ ದೈವಸ್ಥಾನದಲ್ಲಿ ನಡೆಯಲಿರುವ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಕಳಿಯಾಟ ಮಹೋತ್ಸವದ ಉತ್ಸವ ಸಮಿತಿ ರೂಪೀಕರಣ ಇತ್ತೀಚೆಗೆ ದೈವಸ್ಥಾನದಲ್ಲಿ ನಡೆಯಿತು.

ಆಡಳಿತ ಮಂಡಳಿ ಅಧ್ಯಕ್ಷ ತಂಬಾನ್ ಆನೆಕಲ್ಲು ಅಧ್ಯಕ್ಷತೆ ವಹಿಸಿದರು. ಉಬ್ರಂಗಳ ದೇವಾಲಯ ಆಡಳಿತ ಮೊಕ್ತೇಸರ ಕಿಶೋರ್ ಕುಮಾರ್ ಕುಣಿಕುಳ್ಳಾಯ, ನಿತ್ಯಾನಂದ ಶೆಣೈ, ಹರಿನಾರಾಯಣ ಶಿರಂತ್ತಡ್ಕ, ಅನಂತರಾಮ ಕಾಸರಗೋಡು, ಹರೀಶ್ ಕುಣಿಕುಳ್ಳಾಯ ನಡುಮನೆ, ಹರೀಶ್ ಗೋಸಾಡ, ಶ್ರೀಧರ ಕುರುಪ್, ಸಂತೋಷ್ ರೈ ಗಾಡಿಗುಡ್ಡೆ, ಕ್ಷೇತ್ರ ಕಾರ್ನವರ್ ಜಯರಾಮ ನೆಲಲಿಕುಂಜೆ, ಈಶ್ವರ ಮಾಸ್ತರ್ ಮೈಲ್ತೊಟ್ಟಿ, ಸುಬ್ರಹ್ಮಣ್ಯ ಮಾಸ್ತರ್ ಮೈಲ್ತೊಟ್ಟಿ,  ಆನಂದ ಕೆ. ಮವ್ವಾರ್ ಮಾತನಾಡಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಅನಂತಪುರ ಸ್ವಾಗತಿಸಿ, ಕೋಶಾಧಿಕಾರಿ ಅಶೋಕನ್ ಆದೂರು ವಂದಿಸಿ ದರು. ಚಂದ್ರಶೇಖರ ಕುರುಪ್ ಉಬ್ರಂಗಳ ನಿರೂಪಿಸಿದರು.

RELATED NEWS

You cannot copy contents of this page