ಉಳುವಾರ್ ಶಾಲಾ ಕೊಠಡಿಯಲ್ಲಿ ಹೆಡೆ ಎತ್ತಿದ ನಾಗರಹಾವು….!
ಕುಂಬಳೆ: ಉಜಾರು, ಉಳುವಾರು ಜಿ.ಎಲ್.ಪಿ ಶಾಲೆಯ ತರಗತಿಕೊಠಡಿ ಯಲ್ಲಿ ನಾಗರಹಾವು ಕಂಡು ಬಂದಿದೆ. ಇದನ್ನು ಸೆರೆ ಹಿಡಿಯಲು ಯತ್ನಿಸಿದಾಗ ಅದು ತಪ್ಪಿಸಿದೆ. ಹಾವು ಮತ್ತೆ ಇಲ್ಲಿಗೆ ಬರಲು ಸಾಧ್ಯತೆ ಇದೆ ಎಂಬುದರಿಂದಾಗಿ ತರಗತಿಯನ್ನು ಸರಿಯಾಗಿ ಪರಿಶೀಲಿಸಿದ ಬಳಿಕವೇ ಮಕ್ಕಳನ್ನು ಈ ಕೊಠಡಿಗೆ ಪ್ರವೇಶಿಸಿದರೆ ಸಾಕೆಂದು ಮುಖ್ಯೋಪಾ ಧ್ಯಾಯಿನಿ ಸೂಚಿಸಿದ್ದಾರೆ. ಮೊನ್ನೆ ತರಗತಿ ಕೊಠಡಿಯಲ್ಲಿ ಹಾವು ಪ್ರತ್ಯಕ್ಷಗೊಂಡಿದೆ. ಹೊಸತಾಗಿ ನೇಮಕಾತಿ ಲಭಿಸಿದ ತಿರುವನಂತಪುರ ನಿವಾಸಿ ಅಧ್ಯಾಪಕ ತರಗತಿ ಕೊಠಡಿಯಲ್ಲಿ ಕುಳಿತು ಕಂಪ್ಯೂಟರ್ ಕೆಲಸ ನಿರ್ವಹಿಸುತ್ತಿರು ವಾಗ ಹೆಡೆ ಎತ್ತಿದ ಹಾವನ್ನು ಕಂಡಿದ್ದಾರೆ. ಬ್ದ ಉಂಟುಮಾಡಿದಾಗ ಹಾವು ಹರಿದು ಹೋಗಿದೆ. ಮಾಹಿತಿ ತಿಳಿದು ಇತರ ಅಧ್ಯಾಪಕರು ಹುಡುಕಾಡಿದರೂ ಹಾವು ಕಂಡು ಬರಲಿಲ್ಲ.
ಈ ಮೊದಲು ಕೂಡಾ ಈ ಶಾಲೆಯ ಆವರಣದಲ್ಲಿ ನಾಗರಹಾವನ್ನು ಕಂಡಿರುವುದಾಗಿ ಪರಿಸರ ವಾಸಿಗಳು ಹಾಗೂ ಅಧ್ಯಾಪಕರು ತಿಳಿಸುತ್ತಿದ್ದಾರೆ. ಆದರೆ ತರಗತಿ ಕೊಠಡಿಯೊಳಗೆ ಇದೇ ಮೊದಲಾಗಿ ಹಾವು ಕಂಡು ಬಂದಿದೆ. ಪ್ರೈಮರಿಯಿಂದ ನಾಲ್ಕನೇ ತರಗತಿವರೆಗಾಗಿ ಕನ್ನಡ, ಮಲಯಾಳ ಮಾಧ್ಯಮದಲ್ಲಾಗಿ ೧೫೦ರಷ್ಟು ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಹಾವು ಕಂಡುಬಂದ ಹಿನ್ನೆಲೆಯಲ್ಲಿ ಶಾಲೆಯ ಹಿತ್ತಿಲಿನಲ್ಲಿದ್ದ ಕಾಡನ್ನು, ಹುಲ್ಲನ್ನು ತೆರವುಗೊಳಿಸಿ ಶುಚಿಗೊಳಿಸಲಾಗಿದೆ. ಕೊಠಡಿಯ ಬಾಗಿಲು ಮುಚ್ಚಿದರೂ ಅಡಿಭಾಗದಲ್ಲಿ ಹಾವಿಗೆ ಒಳನುಗ್ಗುವ ರೀತಿಯಲ್ಲಿ ಸ್ಥಳವಿದೆಯೆಂದು ಸ್ಥಳೀಯರು ತಿಳಿಸುತ್ತಾರೆ.