ಉಳ್ಳಾಲ ಶ್ರೀ ಭಗವತೀ ಕ್ಷೇತ್ರದಲ್ಲಿ ತೀಯಾ ಸಮಾವೇಶ ಸಮಾಲೋಚನೆ ಸಭೆ
ಮಂಜೇಶ್ವರ: ಉಳ್ಳಾಲ ಶ್ರೀ ಭಗವತೀ ಕ್ಷೇತ್ರದಲ್ಲಿ ತೀಯಾ ಸಮಾವೇಶÀ ನಡೆಸುವ ಬಗ್ಗೆ ಸಮಾಲೋಚನಾ ಸಭೆ ನಡೆಯಿತು. ಭಾರತೀಯ ತೀಯಾ ಸಮಾಜದ ಅಧ್ಯಕ್ಷ ಸದಾಶಿವ ಉಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು. ಬೋಳ್ನಾಡ್ ಶ್ರೀ ಭಗವತಿ ಕ್ಷೆತ್ರದ ಅಧ್ಯಕ್ಷ ಕೃಷ್ಣ .ಎನ್ ಉಚ್ಚಿಲ್ ಉದ್ಘಾಟಿಸಿದರು. ಉಳ್ಳಾಲ ಭಗವತಿ ಕ್ಷೆತ್ರದ ಅಧ್ಯಕ್ಷ ಸುರೇಶ್ ಬಟ್ನಾಗರ್, ಚಂದ್ರಶೇಖರ ಬೆಳ್ಚಾಡ, ಸಶಿಹಿತ್ಲು ಭಗವತಿ ಕ್ಷೆತ್ರದ ಅಧ್ಯಕ್ಷ ಓಮನ ಇಡಿಯ, ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು, ಬೆಂಗಳೂರು ತೀಯಾ ಸಮಾಜದ ಅಧ್ಯಕ್ಷ ಸದಾನಂದ ಬೆಂಗಳೂರು, ತಾರಾನಾಥ್ ಮಾರಿ ಪಳ್ಳ ,ಸುರೇಶ್ ತಲಪಾಡಿ ಭಾಗವಹಿಸಿದರು. ಸಮಾವೇಶ ಜ.26 ರಂದು ನಡೆಸಲು ತೀರ್ಮಾನಿಸಲಾಯಿತು.