ಎಂಡಿಎಂಎ ಸಹಿತ ಓರ್ವ ಸೆರೆ
ಮಂಜೇಶ್ವರ: 2 ಗ್ರಾಂ 6 ಮಿಲ್ಲಿ ಗ್ರಾಂ ಎಂಡಿಎಂಎ ಸಹಿತ ಓರ್ವನನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ಉಪ್ಪಳ ವಿಲೇಜ್‌ನ ಕುಂಟುಪುಣಿ ಸಫೀನ ಮಂಜಿಲ್‌ನ ನಿವಾಸಿ ಪ್ರಸ್ತುತ ಕಡಂಬಾರ್ ಮರದ ಮಿಲ್ ಸಮೀಪ ವಾಸವಾಗಿರುವ ಅಬ್ದುಲ್ ಸತ್ತಾರ್ (46) ಸೆರೆಗೀಡಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ 8 ಗಂಟೆಗೆ ದುರ್ಗಿಪಳ್ಳದಿಂದ ಸೆರೆಹಿಡಿ ದಿದ್ದಾರೆ. ಠಾಣೆಯ ಎಸ್.ಐ. ನಿಖಿಲ್ ನೇತೃತ್ವದಲ್ಲಿ ಗಸ್ತು ನಡೆಸುತ್ತಿದ್ದಾಗ ರಸ್ತೆ ಬದಿಯಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಹಿನ್ನೆಲೆಯಲ್ಲಿ ತಪಾಸಣೆ ನಡೆಸುವ ವೇಳೆ ಎಂಡಿಎಂಎ ಪತ್ತೆಯಾಗಿದೆ.