ಎಂಡೋಸಲ್ಫಾನ್ ಸಂತ್ರಸ್ತರಿಗೆ ವೈದ್ಯಕೀಯ ಶಿಬಿರ ನಡೆಸುವುದಾಗಿ ಸಚಿವೆ
ಕಾಸರಗೋಡು: ಎಂಡೋ ಸಲ್ಫಾನ್ ಸಂತ್ರಸ್ತರ ಪತ್ತೆಗೆ, ಯಾದಿಯಿಂದ ಹೊರಗಾದ 13000 ರಷ್ಟು ಸಂತ್ರಸ್ತರನ್ನು ವೈದ್ಯಕೀಯ ಶಿಬಿರದಲ್ಲಿ ಪರಿಶೀಲಿಸುವುದಕ್ಕೆ ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ಜುಲೈ 2ರಂದು ನಡೆದ ಸಭೆ ತೀರ್ಮಾನಿಸಿದೆಯೆಂದು ಉನ್ನತ ಶಿಕ್ಷಣ, ಸಾಮಾಜಿಕ ನೀತಿ ಸಚಿವೆ ಡಾ| ಆರ್. ಬಿಂದು ನುಡಿದರು. ಆರೋಗ್ಯ ವೈದ್ಯಕೀಯ ಶಿಬಿರವನ್ನು ಸಮಯಾ ನುಸಾರ ನಡೆಸಲಾಗುವುದು. ಶಿಬಿರ ನಡೆಸುವುದಕ್ಕೆ ಜಿಲ್ಲಾಧಿಕಾರಿಗೆ ಹೊಣೆ ನೀಡಲಾಗಿದೆ ಎಂದವರು ತಿಳಿಸಿದರು. ವೈದ್ಯಕೀಯ ಶಿಬಿರ ಆಯೋಜಿಸಲು ಕೇರಳ ಸಾಮಾಜಿಕ ಸುರಕ್ಷಾ ಮಿಶನ್ 15 ಲಕ್ಷ ರೂ. ವಿನಿಯೋಗಿಸಲಾಗು ವುದೆಂದು ಹೆಚ್ಚಿನ ಮೊತ್ತ ಅಗತ್ಯವಾಗಿ ಬಂದರೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಿಂದ ಲಭ್ಯಗೊಳಿಸಲಾಗು ವುದೆಂದು ಸಚಿವೆ ತಿಳಿಸಿದರು.
ಈ ಬಗ್ಗೆ ನಡೆದ ಸಭಯಲ್ಲಿ ಶಾಸ ಕರಾದ ಎನ್.ಎ. ನೆಲ್ಲಿಕುನ್ನು, ಸಿ.ಎಚ್.ಕುಂಞಂಬು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು, ಸಾಮಾಜಿಕ ನೀತಿ ಇಲಾಖೆ ನಿರ್ದೇಶಕ ಎಚ್. ದಿನೇಶನ್, ಜಿಲ್ಲಾಧಿಕಾರಿ ಕೆ. ಇಂಭಶೇಖರ್, ಆರ್ಯಾ ಪಿ ರಾಜ್, ಡೆಪ್ಯುಟಿ ಕಲೆಕ್ಟರ್ ಪಿ. ಸುರ್ಜಿತ್, ವಿವಿಧ ಪಂಚಾಯತ್ ಅಧ್ಯಕ್ಷರು, ವಿವಿಧ ಇಲಾಖೆಗಳ ಪ್ರತಿನಿಧಿಗಳು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಸಾಯಿ ಟ್ರಸ್ಟ್ ತೃತೀಯ ಹಂತದ ಮನೆಗಳನ್ನು ನಿರ್ಮಿಸಲು ಪರಪ್ಪ ವಿಲ್ಲೇಜ್ನಲ್ಲಿ ಸ್ಥಳ ಮಂಜೂರುಗೊಳಿಸಲಿರುವ ಲ್ಯಾಂಡ್ ಸ್ಕೆಚ್ನ್ನು ಸಚಿವೆ ಸಾಯಿ ಟ್ರಸ್ಟ್ ಅಧ್ಯಕ್ಷ ನ್ಯಾಯವಾದಿ ಮಧುಸೂದ ನನ್ರಿಗೆ ಹಸ್ತಾಂತರಿಸಿದರು.