ಎಂಡೋಸಲ್ಫಾನ್ ಸಂತ್ರಸ್ತೆ: ಯುವತಿ ಅಸೌಖ್ಯದಿಂದ ನಿಧನ
ನೀರ್ಚಾಲು: ಎಂಡೋಸಲ್ಫಾನ್ ಸಂತ್ರಸ್ತೆಯಾದ ಯುವತಿ ಅಸೌಖ್ಯದಿಂದ ಮೃತಪಟ್ಟ ಘಟನೆ ನಡೆದಿದೆ.
ಬೇಳ ವಿಷ್ಣುಮೂರ್ತಿ ನಗರ ನಿವಾಸಿ ನಾರಾಯಣ ಎಂಬವರ ಪುತ್ರಿ ಜ್ಯೋತಿ (೩೧) ಮೃತಪಟ್ಟ ದುರ್ದೈವಿ. ಇವರಿಗೆ ಮೊನ್ನೆ ಜ್ವರ ಬಾಧಿಸಿತ್ತೆನ್ನ ಲಾಗಿದೆ. ಇದರಿಂದ ಕುಂಬಳೆಯ ಆಸ್ಪತ್ರೆಗೆ ತಲುಪಿಸಿ ದಾಖಲಿಸಲಾ ಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾ ಗದೆ ನಿನ್ನೆ ನಿಧನ ಸಂಭವಿಸಿದೆ. ಜ್ಯೋತಿ ಜನ್ಮತಃ ವಿಕಲಚೇತನರಾಗಿದ್ದರೆನ್ನಲಾಗಿದೆ. ಪ್ಲಸ್‌ಟು ವರೆಗೆ ಶಿಕ್ಷಣ ಪಡೆದಿದ್ದಾರೆ. ಆದರೆ ಅನಂತರ ಅಸೌಖ್ಯದ ಹಿನ್ನೆಲೆ ಯಲ್ಲಿ ಶಿಕ್ಷಣ ಮುಂದುವರಿ ಸಲಾಗದೆ ಮನೆಯಲ್ಲಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋ ತ್ತರ ಪರೀಕ್ಷೆಗೊಳಪಡಿಸಲಾ ಯಿತು. ಮೃತರು ತಂದೆ, ತಾಯಿ ವಿಮಲ, ಸಹೋದರ ಶ್ರೀಕಾಂತ್, ಸಹೋದರಿ ರೇಖಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಬೇಳ ವಿಷ್ಣುಮೂರ್ತಿ ನಗರದ ಸಿಂಧೂರ ಯುವಕವೃಂದ ಸಂತಾಪಸೂಚಿಸಿದೆ.