ಎಂಡೋಸಲ್ಫಾನ್ ಸಂತ್ರಸ್ತ ನಿಧನ
ಪೆರ್ಲ: ಕಾಟುಕುಕ್ಕೆ ಬಳಿಯ ಪಿಲಿಂಗಲ್ಲು ನಿವಾಸಿ ಪಕ್ಕೀರ ನಾಯ್ಕರ ಪುತ್ರ ಚೇತನ್ (25) ಇಂದು ಮುಂಜಾನೆ ಸ್ವ-ಗೃಹದಲ್ಲಿ ನಿಧನಹೊಂದಿದರು. ಹೃದಯ ಸಂಬಂಧ ಅಸೌಖ್ಯ ಬಾಧಿತನಾಗಿದ್ದ ಇವರು ಕಾಸರಗೋಡು ಜನರಲ್ ಆಸ್ಪತ್ರೆ ಸಹಿತ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಎಣ್ಮಕಜೆ ಪಂಚಾಯತ್ ಎಂಡೋಸಲ್ಫಾನ್ ಸಂತ್ರಸ್ತರ ಯಾದಿಯಲ್ಲಿ ಇವರು ಒಳಗೊಂಡಿದ್ದು, ಇಂದು ಮುಂಜಾನೆ ಮನೆಯಲ್ಲಿ ಅಸೌಖ್ಯ ಉಲ್ಭಣಗೊಂ ಡು ನಿಧನ ಸಂಭವಿಸಿದೆ.ಮೃತರು ತಂದೆ, ತಾಯಿ ಯಮುನ, ಸಹೋ ದರ ತಾರಾನಾಥ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲದ್ದಾರೆ.