ಎಂ.ಡಿ.ಎಂ.ಎ ಸಹಿತ ಓರ್ವ ಸೆರೆ
ಉಪ್ಪಳ: ಮುಂಜಾನೆ ವೇಳೆ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಮಾದಕವಸ್ತುವಾದ ಎಂಡಿಎಂಎ ಸಹಿತ ರಸ್ತೆಯಲ್ಲಿ ನಿಂತಿದ್ದ ಓರ್ವನನ್ನು ಸೆರೆಹಿಡಿಯಲಾಗಿದೆ.
ಉಪ್ಪಳ ಬಳಿಯ ಪತ್ವಾಡಿ ನಿವಾಸಿ ಅಬೂಬಕರ್ ಸಿದ್ದಿಕ್ (28) ಎಂಬಾತ ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ಈತನ ಕೈಯಿಂದ 8.77 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.
ಇಂದು ಮುಂಜಾನೆ 5.30ರ ವೇಳೆ ಮಂಜೇಶ್ವರದ ಕುಳೂರು ಎಂಬಲ್ಲಿಂದ ಈತನನ್ನು ಸೆರೆಹಿಡಿಯ ಲಾಗಿದೆ. ಮಂಜೇಶ್ವರ ಎಸ್‌ಐ ಉಮೇಶ್ ನೇತೃತ್ವದಲ್ಲಿ ಪೊಲೀಸರು ಕುಳೂರು ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದಾಗ ಅಬೂ ಬಕರ್ ಸಿದ್ದಿಕ್ ಬೈಕ್ ಸಹಿತ ನಿಂತಿರು ವುದು ಕಂಡುಬಂದಿದೆ. ಈತನ ಬಗ್ಗೆ ಸಂ ಶಯ ಗೊಂಡು ತಪಾಸಣೆ ನಡೆಸಿದಾಗ ಎಂಡಿಎಂಎ ಪತ್ತೆಯಾಗಿದೆಯೆಂದೂ ಪೊಲೀಸರು ತಿಳಿಸಿದ್ದಾರೆ.