ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಅಮೃತ ಮಹೋತ್ಸವ 31ರಂದು
ಬದಿಯಡ್ಕ: ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ನ ಅಮೃತ ಮಹೋತ್ಸವ ಕಾರ್ಯಕ್ರಮ ಆಗಸ್ಟ್ 31ರÀಂದು ಜರಗಲಿದೆÀ. ಬೆಳಗ್ಗೆ 9.30ಕ್ಕೆ ಧ್ವಜಾರೋಹಣ, ನಂತರ ಬ್ಯಾಂಕ್ನ ಸಮನ್ವಯ ಸಭಾಭವನದಲ್ಲಿ ನಡೆಯಲಿರುವ ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷ ಜಯಂತ ಪಾಟಾಳಿ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಸಹಕಾರಿ ಸಂಘಗಳ ಸಹಾಯಕ ನೋಂದಾವಣಾಕಾರಿ ಲಸಿತಾ ಕೆ. ಉದ್ಘಾಟಿಸುವರು. ಕಾರ್ಯದರ್ಶಿ ಶ್ರೀಕೃಷ್ಣ ಭಟ್ ಕೆ. ವರದಿ ಮಂಡಿಸುವರು. ಕೋ ಓಪರೇಟಿವ್ ಸೊಸೈಟಿಯ ಸಹಾಯಕ ನಿರ್ದೇಶಕಿ ರೆಮಾ ಎ. ಬ್ಯಾಂಕ್ನ ಸಂಸ್ಥಾಪಕ ರಘುರಾಮ ಆಳ್ವರ ಭಾವಚಿತ್ರ ಅನಾವರಣಗೊಳಿ ಸುವರು. ಪುತ್ತಿಗೆ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಆಳ್ವ, ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಅವರನ್ನು ಸನ್ಮಾನಿಸುವರು. ಮಾಜಿ ಅಧ್ಯಕ್ಷರು, ನಿರ್ದೇಶಕರು, ನಿವೃತ್ತ ಕಾರ್ಯದರ್ಶಿಗಳು ಹಾಗೂ ಬ್ಯಾಂಕ್ನ ನಿವೃತ್ತ ಉದ್ಯೋಗಿಗಳನ್ನು ಸಹಕಾರ ಭಾರತಿಯ ರಾಜ್ಯ ಉಪಾಧ್ಯಕ್ಷ ಐತ್ತಪ್ಪ ಮವ್ವಾರು ಅಭಿನಂದಿಸಲಿರುವರು. ಮುಖ್ಯ ಅತಿಥಿಗಳಾಗಿ ಕೇರಳ ರಾಜ್ಯ ಕೋಓಪರೇಟಿವ್ ನಿರ್ದೇಶಕ ಸಾಬು ಅಬ್ರಹಾಂ, ಸಹಾಯಕ ನೋಂದಾವಣಾಕಾರಿಗಳಾದ ನಾಗೇಶ್ ಕೆ., ರವೀಂದ್ರ ಎ., ಪಾಲ್ಗೊಳ್ಳುವರು. ಶಿವರಾಮ ಭಟ್ ಎಚ್., ಗಣೇಶ್ ಪಾರೆಕಟ್ಟ, ಸುನಿಲ್ ಕುಮಾರ್, ಬೈಜು ರಾಜ್, ಸಜಿ ಟಿ., ಎಸ್.ಎನ್.ರಾವ್., ವಿನೋದ್ ಕುಮಾರ್, ಅನಿತಾಶ್ರೀ, ಜನಾರ್ಧನ ಪೂಜಾರಿ, ಕಾವ್ಯಶ್ರೀ, ಜಯಂತಿ ಶುಭ ಕೋರುವರು. ನಿವೃತ್ತ ಕಾರ್ಯದರ್ಶಿ ಕೃಷ್ಣ ಭಟ್ ಅಮ್ಮಂಕಲ್ಲು, ನಿರ್ದೇಶಕ ಎಚ್. ರಾಮ ಭಟ್, ಉಪಾಧ್ಯಕ್ಷ ಶ್ಯಾಮರಾಜ ಡಿ.ಕೆ. ನಿದೇಶಕಿ ಲಕ್ಷಿö್ಮÃ ವಿ. ಭಟ್ ಭಾಗವಹಿಸುವರು.
ಕಾಳುಮೆಣಸು ಕೃಷಿ ಮತ್ತು ನಿರ್ವಹಣೆ ಕುರಿತು ತಜ್ಞ ಕೃಷಿಕ ಡಾ| ವೇಣುಗೋಪಾಲ ಕಳೆಯತ್ತೋಡಿ ವಿಚಾರಗೋಷ್ಠಿ ಮಂಡಿಸುವರು. 12.30ರಿಂದ ಸಹಕಾರ ಭಾರತಿಯ ರಾಷ್ಟಿçÃಯ ಸಮಿತಿ ಸದಸ್ಯ ವಕೀಲ ಕರುಣಾಕರನ್ ನಂಬ್ಯಾರ್ ಸರಕಾರದಿಂದ ಜನರಿಗೆ ಸಿಗುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡುವರು. 2.30ರಿಂದ ರಾಜೇಶ್ ಮಳಿ, ಇವರಿಂದ ಇಂದ್ರಜಾಲ ಪ್ರದರ್ಶನ, 4 ಗಂಟೆಯಿAದ ವಿಶಾಲ ಯಕ್ಷ ಬಳಗ ನಂದಳಿಕೆ ಕಾರ್ಕಳ ಇವರಿಂದ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.