ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಡಿ.ಕೆ. ಶ್ಯಾಮರಾಜ್, ಉಪಾಧ್ಯಕ್ಷರಾಗಿ ಹರಿಣಿ ನಾಯ್ಕ್ ಆಯ್ಕೆ

ಸೀತಾಂಗೋಳಿ: ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಡಿ.ಕೆ. ಶ್ಯಾಮರಾಜ್ ಹಾಗೂ ಉಪಾಧ್ಯಕ್ಷರಾಗಿ ಹರಿಣಿ ನಾಯ್ಕ್‌ರನ್ನು ಆಯ್ಕೆ ಮಾಡಲಾಯಿತು. 13 ಮಂದಿಯ ಸದಸ್ಯರು ಆಡಳಿತ ಸಮಿತಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳ ವಿರುದ್ಧ ಒಬ್ಬರು ಸ್ಪರ್ಧಿಸಿದ್ದರು ಈ ಹಿನ್ನೆಲೆಯಲ್ಲಿ ಏಳು ಸೀಟುಗಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳಾದ ಏಳು ಮಂದಿ ಚುನಾಯಿತರಾಗಿದ್ದಾರೆ. ಎಂ. ಆನಂದ, ಎಚ್. ಹರೀಶ, ಪಿ. ಮಹೇಶ, ಎಸ್. ನಟೇಶ್ ಕುಮಾರ್, ಎನ್.ಕೆ. ನಾರಾಯಣ, ಡಿ.ಕೆ. ಶ್ಯಾಮರಾಜ್, ಕೆ. ವಿನೋದ್, ಕೆ. ಬಿಜು, ಶ್ರೀಕೃಷ್ಣಪ್ರಸಾದ್, ಅವಿನಾಶ್, ಎಸ್.ಡಿ. ಉಷಾ ಎಂಬಿವರು ಗೆಲುವು ಸಾಧಿಸಿದ ಸಹಕಾರ ಭಾರತಿ ಅಭ್ಯರ್ಥಿಗಳಾಗಿದ್ದಾರೆ.

You cannot copy contents of this page