ಎಡನೀರಿನಲ್ಲಿ ಅಪಘಾತಕ್ಕೀಡಾದ ಟ್ಯಾಂಕರ್ ಲಾರಿ ರಸ್ತೆಯಿಂದ ತೆರವು: ವಾಹನ ಸಂಚಾರ ಪುನರಾರಂಭ
ಕಾಸರಗೋಡು: ಚೆರ್ಕಳ-ಬದಿಯಡ್ಕ ರಸ್ತೆಯ ಎಡನೀರಿನಲ್ಲ್ಲಿ ಅಪಘಾತಕ್ಕೀಡಾದ ಗ್ಯಾಸ್ ಟ್ಯಾಂಕರ್ ಲಾರಿಯನ್ನು ಯಶಸ್ವಿ ಯಾಗಿ ತೆರವುಗೊಳಿಸಲಾಯಿತು. ಅನಂತರ ಈ ರಸ್ತೆಯಲ್ಲಿ ವಾಹನ ಸಂಚಾರ ಆರಂಭಗೊಂಡಿತು.
ಮಂಗಳೂರಿನಿಂದ ಕೊಚ್ಚಿಗೆ ತೆರಳುತ್ತಿದ್ದ ಟ್ಯಾಂಕರ್ ಲಾರಿ ಎಡನೀರು-ಕೋರಿಕ್ಕಾರ್ ಮೂಲೆಯಲ್ಲಿ ನಿನ್ನೆ ಮಧ್ಯಾಹ್ನ ವೇಳೆ ಅಪಘಾತಕ್ಕೀಡಾಗಿತ್ತು. ರಸ್ತೆಗೆ ಅಡ್ಡವಾಗಿ ಮಗುಚಿಬಿದ್ದ ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗುತ್ತಿ ದೆಯೇ ಎಂಬ ಆತಂಕ ಹುಟ್ಟಿಕೊಂ ಡಿತು. ಅಗ್ನಿಶಾಮಕದಳ ತಲುಪಿ ತಪಾಸಣೆ ನಡೆಸಿ ಅನಿಲ ಸೋರಿಕೆಯಿ ಲ್ಲವೆಂದು ಖಚಿತಪಡಿಸಿದ ಬಳಿಕ ಆತಂಕ ದೂರವಾಯಿತು. ಟ್ಯಾಂಕರ್ ಲಾರಿ ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಆ ಮೂಲಕದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಬಳಿಕ ಅಸಿಸ್ಟೆಂಟ್ ಸ್ಟೇಶನ್ ಆಫೀಸರ್ ಕೆ.ಎಂ. ರಾಜೇಶ್ ನೇತೃತ್ವದಲ್ಲಿ ಅಗ್ನಿಶಾಮಕದಳ ಹಾಗೂ ವಿದ್ಯಾನಗರ ಇನ್ಸ್ಪೆಕ್ಟರ್ ಯು.ಪಿ ವಿಪಿನ್ರ ನೇತೃತ್ವದಲ್ಲಿ ಪೊಲೀಸರು ತಲುಪಿ ಲಾರಿಯನ್ನು ತೆರವುಗೊಳಿ ಸಲಿರುವ ಕ್ರಮ ನಡೆಸಿದರು. ಕ್ರೇನ್ ಬಳಸಿ ಲಾರಿಯನ್ನು ರಸ್ತೆಯಿಂದ ತೆರವುಗೊಳಿಸಿದ ಬಳಿಕ ಆ ರಸ್ತೆಯಲ್ಲಿ ವಾಹನ ಸಂಚಾರ ಆರಂಭಗೊಂಡಿತು.