ಎಡನೀರಿನಲ್ಲಿ ಕನ್ನಡ ಸಂಸ್ಕೃತಿ ಶಿಬಿರ ಸಮಾರೋಪ
ಬದಿಯಡ್ಕ: ಸದಭಿರುಚಿಯ, ಬದುಕನ್ನು ಉನ್ನತಿಗೊಯ್ಯುವ ಅರಿವು ಎಲ್ಲಿದ್ದರೂ ಅದನ್ನು ಕರಗತ ಗೊಳಿಸುವಲ್ಲಿ ವಿದ್ಯಾರ್ಥಿಗಳು ತೆರೆದ ಹೃದಯದವರಾಗಿ ರಬೇಕು. ಸಾಗರದಂತೆ ಸರ್ವವವನ್ನೂ ಸ್ವೀಕರಿಸಿ, ಬೇಕಿದ್ದನ್ನು ಮಾತ್ರ ಇರಿಸಿಕೊಳ್ಳುವ, ಆರ್ದ್ರ ಮಣ್ಣಿನಂತೆ ಆಕಾರಗೊಳಿಸಿಕೊಳ್ಳುವ ಮೃದುತ್ವ ಬೆಳವಣಿಗೆಯ ಸ್ವರೂಪ. ಈ ನಿಟ್ಟಿನಲ್ಲಿ ಪೋಷಕರ ಪಾತ್ರವೂ ಮಹತ್ತರದು ಎಂದು ಖ್ಯಾತ ಯಕ್ಷಿಣಿಗಾರ ಪ್ರೊ.ಶಂಕರ್ ಕರೆ ನೀಡಿದರು.
ಭೂಮಿಕಾ ಪ್ರತಿಷ್ಠಾನ ಉಡುಪು ಮೂಲೆ ಹಾಗೂ ಕರ್ನಾಟಕಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಹಯೋಗದೊಂದಿಗೆ ಎಡನೀರುಶ್ರೀ ಈಶ್ವರಾನಂದ ಭಾರತೀ ಸ್ವಾಮೀಜಿ ಶಾಲೆಯಲ್ಲಿ ನಡೆದ ಆರು ದಿನಗಳ ಕನ್ನಡ ಸಂಸ್ಕೃತಿ ಶಿಬಿರ 2024 ರ ಶನಿವಾರ ನಡೆದ ‘ಅಕ್ಷಯ ವಸಂತ’ ಸಮಾರೋಪದಲ್ಲಿ ಅವರು ಮಾತನಾಡಿದರು.
ಮಾದಕ ದ್ರವ್ಯಗಳ ವಿರುದ್ದಜಾಗೃತಿ, ನೈರ್ಮಲ್ಯ ನಿರ್ವಹಣೆ, ಮೌಢ್ಯ ನಿರ್ಮಿತಕಲ್ಪನಾ ಬದುಕಿನಿಂದ ಪಾರಾಗುವ ಚಾಕಚಕ್ಯ ನಡೆಗಳ ಬಗ್ಗೆ ದೇಶಾದ್ಯಂತ ವಿಸ್ಕೃತವಾದ ಅಕ್ಷಯ ವಸಂತ ಕಾರ್ಯಕ್ರಮ ಆಯೋಜಿಸಿದ್ದು, ಈ ಮೂಲಕ ಜಾಗೃತ ಸಮಾಜ-ರಾಷ್ಟç ನಿರ್ಮಾಣದ ಲಕ್ಷö್ಯಇದರದ್ದು. ಭೂಮಿಕಾ ಪ್ರತಿಷ್ಠಾನದಿಂದ ಉಚಿತವಾದ ಇಂತಹ ಶಿಬಿರ ನಿಜವಾಗಿಯೂ ಸುಧಾರಣಾತತ್ಪರತೆಗೆ ಭೂಷಣ ಎಂದರು. ಪ್ರತಿಷ್ಠಾನದ ಅಧ್ಯಕ್ಷೆ ವಿದುಷಿಃ ಅನುಪಮಾ ರಾಘವೇಂದ್ರ ಉಡುಪಮೂಲೆ ಉಪಸ್ಥಿತರಿದ್ದು, ಯಶಸ್ಸಿಗೆ ಕಾರಣರಾದವರನ್ನು ಅಭಿನಂದಿಸಿದರು. ಜ್ಯೂನಿಯರ್. ಶಂಕರ್ ಉಪಸ್ಥಿತರಿದ್ದರು.
ಸಮಾರೋಪದ ದಿನ ಬೆಳಗ್ಗೆ ಮನಃಶಾಸ್ತçಜ್ಞೆ ರಶ್ಮಿ ಅವರಿಂದ ಮನೋನಿಗ್ರಹ, ನಿರ್ವಹಣೆ, ಲಕ್ಷö್ಯಪ್ರಾಪ್ತಿಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತರಬೇತಿ ನಡೆಯಿತು. ಬಳಿಕ ಪ್ರೊ.ಶಂಕರ್-ಜ್ಯೂನಿಯರ್ ಶಂಕರ್ಅವರಿAದ ಜಾದೂ ಸಹಿತವಾದಅಕ್ಷಯ ವಸಂತಜಾಗೃತಿಕಾರ್ಯಕ್ರಮ ನಡೆಯಿತು. ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳ ಹೆತ್ತವರ ಪರವಾಗಿ ಡಾ.ಸೌಮ್ಯ, ಅಕ್ಷತ ಭಟ್, ಶಿಬಿರಾರ್ಥಿಗಳು ಅನುಭವ ಹಂಚಿಕೊAಡರು. ವಿದುಷಿಃ ಅನುಪಮಾ ರಾಘವೇಂದ್ರ ಸ್ವಾಗತಿಸಿ, ವಂದಿಸಿದರು.