ಎಡನೀರು ಮಠಕ್ಕೆ ಶೃಂಗೇರಿ ಶ್ರೀಗಳ  ಭೇಟಿ 28ರಂದು

ಎಡನೀರು: ಶೃಂಗೇರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ 28ರಂದು ಸಂಜೆ 6 ಗಂಟೆಗೆ ಎಡನೀರು ಶ್ರೀಮಠಕ್ಕೆ ಆಗಮಿಸುವರು. ಶ್ರೀಮಠದಲ್ಲಿ ವಾಸ್ತವ್ಯ ಇರುವ ಶ್ರೀಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಯಶಸ್ವಿಗೆ ಶ್ರೀ ಮಠದಲ್ಲಿ ಸೇರಿದ ಭಕ್ತರ ಸಭೆಯಲ್ಲಿ ತೀರ್ಮಾನಿಸಲಾಯಿತು. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಾದ ನೀಡಿದರು. ಶ್ರೀ ಮಠದ ಮ್ಯಾನೇಜರ್ ಶ್ರೀ ರಾಜೇಂದ್ರ ಕಲ್ಲೂರಾಯ ಪ್ರಾಸ್ತಾವಿಕ ನುಡಿದು ಸ್ವಾಗತಿಸಿದರು. ಮುರಳಿ ತಂತ್ರಿ ಕುಂಟಾರು, ಶಿವರಾಮ ಭಟ್ ಪೆರಡಾಲ, ವೆಂಕಟ ಕೃಷ್ಣ ಭಟ್, ಶ್ರಿವೇಣುಗೋಪಾಲ ಮಾಸ್ಟರ್, ಭವಾನಿ ಶಂಕರ, ಸೂರ್ಯ ಭಟ್, ಉಮೇಶ್ ಎಡನೀರು, ಕಮಲಾಕ್ಷ ಎಡನೀರು, ಶ್ರೀ ಮಹೇಶ್ ಒಳಕುಂಜ, ಗಣೇಶ್ ಭಟ್ ಅಳಕ್ಕೆ, ಸಿ.ಯಚ್.ಗೋಪಾಲ ಭಟ್, ವಿಜಯ ಕುಮಾರ್, ತೇಜಸ್ವೀ ಹೇರಳ, ಈಶ್ವರ ಭಟ್, ಗಣೇಶ್ ಭಟ್ ಕುಂಜೀರ್ಕನ, ಶ್ರೀ ಸುಬ್ರಹ್ಮಣ್ಯ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು. ಸತೀಶ್ ಎಡನೀರು ವಂದಿಸಿದರು.

RELATED NEWS

You cannot copy contents of this page