ಎಡನೀರು ಮಠದಲ್ಲಿ ಶ್ರೀದೇವಿ ಭಾಗವತ, ಯಕ್ಷಗಾನ ತಾಳಮದ್ದಳೆ ನವಾಹ ಸಮಾಪ್ತಿ 11ರಂದು

ಎಡನೀರು: ಎಡನೀರು ಮಠದಲ್ಲಿ ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಚತುರ್ಥ ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭದಲ್ಲಿ ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಇವರ ಸೇವಾರೂಪದಲ್ಲಿ ಜರಗುತ್ತಿರುವ ಶ್ರೀಮದ್ ದೇವೀ ಭಾಗವತ ನವಾಹ ಮತ್ತು ಯಕ್ಷಗಾನ ತಾಳಮದ್ದಳೆ ನವಾಹದ ಸಮಾರೋಪ 11ರಂದು ಜರಗಲಿರುವುದು. ಅಪರಾಹ್ನ 2.30ರಿಂದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಕಾಸರಗೋಡು ಇವರಿಂದ ಯಕ್ಷಗಾನ ಬೊಂಬೆಯಾಟ ‘ಮಹಿಷಾಸುರ ವಧೆ’, ಸಂಜೆ 4 ಗಂಟೆಯಿAದ ಯಕ್ಷಗಾನ ತಾಳಮದ್ದಳೆ ‘ಶಾಂಭವೀ ವಿಜಯ’ ನಡೆಯಲಿದೆ. ಹಿಮ್ಮೇಳದಲ್ಲಿ ಕಾವ್ಯಶ್ರೀ ಅಜೇರು, ಚಿನ್ಮಯಭಟ್ ಕಲ್ಲಡ್ಕ ಹಾಗೂ ಲಕ್ಷಿö್ಮÃಶ ಅಮ್ಮಣ್ಣಾಯ, ಕೃಷ್ಣ ಪ್ರಕಾಶ ಉಳಿತ್ತಾಯ, ಲವಕುಮಾರ್ ಐಲ, ನಿಶ್ವತ್ ಜೋಗಿ, ಅರ್ಥಧಾರಿ ಗಳಾU ಹಿರಣ್ಯ ವೆಂಕಟೇಶ್ವರ ಭಟï, ಗಣರಾಜ ಕುಂಬಳೆ, ವಾಸುದೇವ ರಂಗಾಭಟï, ರವಿರಾಜ ಪನೆಯಾಲ, ದಿನೇಶ ಶೆಟ್ಟಿ ಕಾವಳಕಟ್ಟೆ, ಸರ್ಪಂಗಳ ಈಶ್ವರ ಭಟï, ಸುಣ್ಣಂಬಳ ವಿಶ್ವೇಶ್ವರ ಭಟï ಭಾಗವಹಿಸುವರು.
ಸಂಜೆ 6 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸರಕಾರದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ| ಟಿ.ಶ್ಯಾಮ್ ಭಟ್ ಸಮಾರೋಪ ಭಾಷಣ ಮಾಡಲಿದ್ದಾರೆ. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಬಲರಾಮ ಆಚಾರ್ಯ ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆ ಅಗಲಿದ ಹಿರಿಯ ಕಲಾವಿದ ಕುಂಬಳೆ ಶ್ರೀಧರ ರಾವ್ ಹಾಗೂ ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇವರ ಸಂಸ್ಮರಣಾ ಕಾರ್ಯಕ್ರಮ ಈ ಸಂದರ್ಭದಲ್ಲಿ ನಡೆಯಲಿದೆ. ಖ್ಯಾತ ಯಕ್ಷಗಾನ ಕಲಾವಿದ ವಾಸುದೇವ ರಂಗಾ ಭಟ್ ಸಂಸ್ಮರಣಾ ಭಾಷಣ ಮಾಡಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page