ಎಡನೀರು ಶ್ರೀಗಳ ಚಾತುರ್ಮಾಸ್ಯ: ಮಾನ್ಯ ವಲಯ ಸಮಿತಿ ಸಭೆ
ಎಡನೀರು: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ನಾಲ್ಕನೇ ಚಾತುರ್ಮಾಸ್ಯ ವೃತಾಚರಣೆ ಈ ತಿಂಗಳ 21ರಿಂದ ಸೆಪ್ಟಂಬರ್ 18ರ ತನಕ ಎಡನೀರು ಮಠದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇದರ ಪೂರ್ವಭಾವಿಯಾಗಿ ಮಾನ್ಯ ವಲಯ ಸಮಿತಿ ಸಭೆ ಇತ್ತೀಚೆಗೆ ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಸಭಾಂಗಣದಲ್ಲಿ ಜರಗಿತು. ಪುದುಕೋಳಿ ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸುವರು. ಚಾತುರ್ಮಾಸ್ಯ ಸಮಿತಿಯ ಕಾರ್ಯದರ್ಶಿ ಸೂರ್ಯನಾರಾಯಣ ಭಟ್ ಎಡನೀರು ಮಾತನಾಡಿದರು. ಸಂಚಾಲಕ ಸತೀಶ್ ರಾವ್ ಎಡನೀರು, ಬದಿಯಡ್ಕ ಪಂ. ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ, ಶ್ರೀನಾಥ್ ಕೊಲ್ಲಂಗಾನ, ನಿತ್ಯಾನಂದ ಮಾನ್ಯ, ಎಂ.ಎಚ್. ಜನಾರ್ದನ, ಮಂಜುನಾಥ ಮಾನ್ಯ ಉಪಸ್ಥಿತರಿದ್ದರು. ವಿಜಯ ಕುಮಾರ್ ಮಾನ್ಯ ಸ್ವಾಗತಿಸಿ, ಸುಂದರ ಶೆಟ್ಟಿ ಕೊಲ್ಲಂಗಾನ ವಂದಿಸಿದರು. ಮಾನ್ಯ ವಲಯ ಸಮಿತಿ ರೂಪೀಕರಿಸಲಾಗಿದ್ದು, ಅಧ್ಯಕ್ಷರಾಗಿ ಪಿ. ಶ್ರೀಕೃಷ್ಣ ಭಟ್ ಪುದುಕೋಳಿ, ಉಪಾಧ್ಯಕ್ಷರಾಗಿ ರಾಮ ಕೆ. ಕಾರ್ಮಾರು, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ವಳಕುಂಜ, ಕಾರ್ಯದರ್ಶಿಯಾಗಿ ವಿಜಯ ಕುಮಾರ್ ಮಾನ್ಯ, ಕೋಶಾಧಿಕಾರಿಯಾಗಿ ಶ್ಯಾಮ್ ಪ್ರಸಾದ್ ಮಾನ್ಯ ಆಯ್ಕೆಯಾದರು.