ಎಡರಂಗಕ್ಕೆ ಜನರು ಮತ ನೀಡಿ ಗೆಲ್ಲಿಸಿದ್ದು ದಿಲ್ಲಿಯಲ್ಲಿ ಹೋರಾಟ ನಡೆಸಲಲ್ಲ- ಪಿ.ಕೆ. ಕೃಷ್ಣದಾಸ್

ಕಾಸರಗೋಡು: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೇರಳದ ಜನತೆ ಎಡರಂಗವನ್ನು ಗೆಲ್ಲಿಸಿ ಅಧಿಕಾ ರದ ಗದ್ದುಗೆ ನೀಡಿರುವುದು ದಿಲ್ಲಿಯಲ್ಲಿ ಕೇಂದ್ರ ಸರಕಾರದ ವಿರುದ್ಧ ಹೋರಾಟ ನಡೆಸಲು ಅಲ್ಲ. ಬದಲಾಗಿ ಕೇರಳವನ್ನು ಆಳಲು ಆಗಿದೆ. ಆದ್ದರಿಂದ ಎಡರಂಗ ತನ್ನ ಆಡಳಿತೆಯ ಬಗ್ಗೆ ಕೇರಳದಲ್ಲಿ ಗಮನ ಹರಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ಹೇಳಿದ್ದಾರೆ. ಕಾಸರಗೋ ಡಿನಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡುತ್ತಿದ್ದರು.

ಹೋರಾಟ ನಡೆಸಬೇಕಾಗಿರುವುದು ದಿಲ್ಲಿಯಲ್ಲಿ ಅಲ್ಲ. ಬದಲಾಗಿ ತಿರುವನಂ ತಪುರದಲ್ಲಿ ನಡೆಸಲು ಎಡರಂಗ ಮುಂದಾಗಬೇಕಾಗಿತ್ತು. ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಸರ್ವ ರಂಗದಲ್ಲೂ ಪೂರ್ಣ ಪರಾಜಯ ಗೊಂ ಡಿದೆ ಎಂಬುದನ್ನು ಎಡರಂಗ ನಿನ್ನೆ ದಿಲ್ಲಿ ಯಲ್ಲಿ ನಡೆಸಿದ ಪ್ರತಿಭಟನೆ ಘೋಷಿ ಸಿದೆ. ಆಡಳಿತ ನಡೆಸಲು ಸಾಧ್ಯವಾಗು ತ್ತಿಲ್ಲವೆಂದಾದರೂ ರಾಜೀನಾಮೆ ನೀಡಿ ಹೊರ ಹೋಗುವುದೇ ಪಿಣರಾಯಿ  ವಿಜಯನ್ ನೇತೃತ್ವದ  ಸರಕಾರಕ್ಕೆ ಒಳ್ಳೆಯದು. ಕಳೆದ ಒಂಭತ್ತು ವರ್ಷಗಳಲ್ಲಿ  ಕೇಂದ್ರ ಸರಕಾರದಿಂದ ತೆರಿಗೆ ಮತ್ತು ಅಭಿವೃದ್ಧಿ ಯೋಜನೆಗಳಿಗಾಗಿ ಕೇರಳಕ್ಕೆ ಎಷ್ಟು ಕೋಟಿ ರೂ. ಲಭಿಸಿದೆ, ಇನ್ನು ಎಷ್ಟು ಹಣ ಲಭಿಸಲು ಬಾಕಿ ಇದೆ ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು. ದಿಲ್ಲಿಯಲ್ಲಿ ನಡೆಸಿದ ಪ್ರತಿಭಟನೆಗಾಗಿ ವ್ಯಯಿಸಲಾದ ಹಣವನ್ನು ಅದರಲ್ಲಿ ಭಾಗವಹಿಸಿದ ವರೆಲ್ಲ ಅವರ ಸ್ವಂತ ಜೇಬಿನಿಂದಲೇ ನೀಡಬೇಕು ಎಂದೂ ಕೃಷ್ಣದಾಸ್ ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page