ಎಡರಂಗದ ಅಭ್ಯರ್ಥಿಗೆ ಉದುಮ ಮಂಡಲದ ವಿವಿಧೆಡೆ ಸ್ವಾಗತ
ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ ಎಡರಂಗ ಅಭ್ಯರ್ಥಿ ಎಂ.ವಿ. ಬಾಲಕೃಷ್ಣನ್ ನಿನ್ನೆ ಉದುಮ ಮಂಡಲದ ವಿವಿಧ ಕಡೆಗಳಲ್ಲಿ ಪರ್ಯಟನೆ ನಡೆಸಿದರು. ಪೆರಳಂ, ಉದಯನಗರದಿಂದ ಆರಂಭಗೊಂಡ ಪರ್ಯಟನೆ ವಿವಿಧ ಕಡೆಗಳಲ್ಲಿ ಸಾಗಿ ಪೆರುಂಬಳದಲ್ಲಿ ಸಮಾಪ್ತಿಗೊಂಡಿದೆ. ಕಾರ್ಯಕ್ರಮಗಳಲ್ಲಿ ವಿವಿಧ ಸಂಘಟನೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು. ಮುಖಂಡರಾದ ಸಿ.ಎಚ್. ಕುಂಞಂಬು, ಪಿ. ಜನಾರ್ದನನ್, ಕೆ. ಕುಂಞಿರಾಮನ್, ಇ. ಪದ್ಮಾವತಿ, ಡಾ. ಸಿ. ಬಾಲನ್, ಕೆ. ಮಣಿಕಂಠನ್, ಮಧು ಮುದಿಯಕ್ಕಾಲ್, ಸಿ. ರಾಮಚಂದ್ರನ್, ಪಿ.ವಿ. ರಾಜೇಂದ್ರನ್ ಮೊದಲಾದವರು ಜೊತೆಗಿದ್ದರು.