ಅಡೂರು: ದೇಲಂಪಾಡಿಯಿಂದ ಆರಂಭಗೊಂಡು ಇರಿಯಣ್ಣಿಯಲ್ಲಿ ಸಮಾಪ್ತಿಯಾದ ಕಾಸರಗೋಡು ಲೋಕಸಭಾ ಕ್ಷೇತ್ರದ ಎಡರಂಗದ ಅಭ್ಯರ್ಥಿ ಎಂ.ವಿ. ಬಾಲಕೃಷ್ಣನ್ ಮಾಸ್ತರ್‌ರ ಪರ್ಯಟನೆಗೆ ವಿವಿಧೆಡೆ ಸ್ವಾಗತ ನೀಡಲಾಯಿತು. ನಿನ್ನೆ ಅಪರಾಹ್ನ ೩ ಗಂಟೆಗೆ ದೇಲಂಪಾಡಿಯಿಂದ ಆರಂಭಗೊಂಡು ಅಡ್ಕಂ, ಬೆಳ್ಳಚ್ಚೇರಿ, ಮಲ್ಲಂಪಾರೆ, ಪಾಂಡಿ, ಪಲ್ಲಂಜಿ ಕಾನತ್ತೂರ್, ಕೋಟೂರು, ಚೆಟ್ಟುಂಗಲ್, ಬೋವಿಕ್ಕಾನ ಮೊದಲಾದೆಡೆಗಳ ಸ್ವಾಗತದ ನಂತರ ಇರಿಯಣ್ಣಿಯಲ್ಲಿ ಸಮಾಪ್ತಿಗೊಂಡಿತು. ಮಹಿಳೆಯರು, ಮಕ್ಕಳ ಸಹಿತ ನೂರಾರು ಮಂದಿ ವಿವಿಧ ಕಡೆಗಳಲ್ಲಿ ಭಾಗವಹಿಸಿದರು. ಇರಿಯಣ್ಣಿಯಲ್ಲಿ ಬೀದಿ ನಾಟಕ ಪ್ರದರ್ಶಿಸಲಾಯಿತು. ಕಾರ್ಯಕ್ರಮಗಳಲ್ಲಿ ಎಡರಂಗದ ಮುಖಂಡರಾದ ಪಿ. ಜನಾರ್ದನನ್,ಟಿ. ಕೃಷ್ಣನ್, ಇ. ರಾಜನ್, ಇ. ಪದ್ಮಾವತಿ, ಕೆ. ಮಣಿಕಂಠನ್, ಎಂ. ಮಾಧವನ್, ಮಧು ಮುದಿಯಕ್ಕಾಲ್, ಕೆ. ಕುಂಞಿರಾಮನ್, ಎ.ಪಿ. ಉಷಾ, ಎ. ಚಂದ್ರಶೇಖರನ್, ಟಿ. ನಾರಾಯಣನ್, ಸಿ. ರಾಮಚಂದ್ರನ್, ರಾಧಾಕೃಷ್ಣ ಪೆರುಂಬಳ ಭಾಗವಹಿಸಿದರು.
