ಎಡರಂಗ ಅಭ್ಯರ್ಥಿ ಗೆಲುವಿಗಾಗಿ ಪೈವಳಿಕೆಯಲ್ಲಿ ಚುನಾವಣಾ ರ‍್ಯಾಲಿ
ಪೈವಳಿಕೆ: ಎಡರಂಗ ಪೈವಳಿಕೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಪೈವಳಿಕೆಯಲ್ಲಿ ಚುನಾವಣಾ ರ‍್ಯಾಲಿ ಹಾಗೂ ಸಾರ್ವಜನಿಕ ಸಭೆ ನಡೆಯಿತು.
ಸಿಪಿಐ ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಹಾಗೂ ರಾಜ್ಯಸಭಾ ಸದಸ್ಯ ಸಂತೋಷ್ ಕುಮಾರ್ ಪಿ ಉದ್ಘಾಟಿಸಿದರು. ಕೇಂದ್ರದ ಬಿಜೆಪಿ ಸರಕಾರವು ಕೇರಳಕ್ಕೆ ಅರ್ಹತೆ ಇರುವ ತೆರಿಗೆಯ ಶೇಕಡವಾರುವನ್ನು ನೀಡದೆ ಅರ್ಥಿಕವಾಗಿ ದಿಗ್ಬಂಧನ ಗೊಳಿಸುವಾಗ ಕೇರಳದ ಯುಡಿಎಫ್ ಸಂಸದರು ಒಂದಕ್ಷರ ನುಡಿಯಲಿಲ್ಲ. ರಾಜ್ಯಪಾಲರು ರಾಜ್ ಭವನ್‌ವನ್ನು ಆರ್.ಎಸ್.ಎಸ್ ಕಾರ್ಯಾಲಯದಂತೆ ನೋಡುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕಾಂಗ್ರೆಸಿಗೆ ನಿಲುವು ಹೇಳಲು ಸಾಧ್ಯವಾಗುತ್ತಿಲ್ಲ. ಬಿಜೆಪಿಯ ವಿರುದ್ದ ಬಲಿಷ್ಟವಾದ ನಿಲುವನ್ನು ಸ್ವೀಕರಿಸುವುದು ಎಡರಂಗವಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಎಡರಂಗ ಮಂಡಲ ಕಾರ್ಯದರ್ಶಿ ಕೆ ಆರ್ ಜಯಾನಂದ, ಅಧ್ಯಕ್ಷ ರಾಮಕೃಷ್ಣÀ ಕಡಂಬಾರು, ರಾಘವ ಚೇರಾಲ್, ಅಜಿತ್ ಎಂ ಸಿ, ಅಬ್ದುಲ್ ರಝಾಕ್ ಚಿಪ್ಪಾರು, ಪಂಚಾಯತ್ ಅಧ್ಯಕ್ಷೆ ಜಯಂತಿ, ಲಾರೆನ್ಸ್ ಡಿಸೋಜ, ಅಬ್ದುಲ್ಲಾ.ಕೆ, ಪುರುಷೋತ್ತಮ ಬಳ್ಳೂರು,ವಿನಯ್ ಕುಮಾರ್, ಕೇಶವ ಬಾಯಿಕಟ್ಟೆ, ಅಶ್ವತ್ಥ್ ಎಂ. ಸಿ. ಮತ್ತಿತರರು ಮಾತನಾಡಿದರು. ಅಬ್ದುಲ್ ಹಾರಿಸ್ ಪೈವಳಿಕೆ ಸ್ವಾಗತಿಸಿದರು.