ಎಡರಂಗ ಮಂಜೇಶ್ವರ ವಿಧಾನಸಭಾ ಮಂಡಲ ಲೋಕಸಭಾ ಚುನಾವಣೆ ಸಮಿತಿ ರೂಪೀಕರಣ
ಮಂಜೇಶ್ವರ: ಎಲ್‌ಡಿಎಫ್ ಕಾಸರಗೋಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ ವಿ ಬಾಲಕೃಷ್ಣನ್ ಮಾಸ್ಟರ್‌ರ ಜಯಕ್ಕಾಗಿ ಮಂಜೇಶ್ವರ ವಿಧಾನಸಭಾ ಮಂಡಲ ಸಮಿತಿ ರೂಪಿಕರಣ ಸಮಾವೇಶ ನಿನ್ನೆ ಕುಂ ಬಳೆ ಶಾಂತಿಪಳ್ಳದಲ್ಲಿ ಜರಗಿತು. ಸಿಪಿಐ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಸಿ.ಪಿ ಮುರಳಿ ಉದ್ಘಾಟಿಸಿದರು. ಜಯರಾಮ ಬಲ್ಲಂಗುಡೇಲ್ ಅಧ್ಯಕ್ಷತೆ ವಹಿಸಿದ್ದರು. ಎಡರಂಗದದ ಲೋಕ ಸಭಾ ಮಂಡಲ ಕನ್ವಿನರ್ ಕೆ.ಪಿ ಸತೀಶ್ಚಂ ದ್ರನ್, ಅಭ್ಯರ್ಥಿ ಎಂ ವಿ ಬಾಲಕೃಷ್ಣನ್ ಮಾಸ್ಟರ್, ನೇತಾರರಾದ ಸಜಿ ಸೆಬಾಸ್ಟಿ ಯನ್, ಸುಬೈರ್ ಪಡುಪ್ಪು, ಸುರೇಶ್ ಪುತಿಯಲಾಟ್ಟ್, ಗೋವಿಂದನ್ ಪಳ್ಳಿಕ್ಕಾಪಿಲ್, ಬೇಬಿ ಬಾಲಕೃಷ್ಣನ್, ಕೆ.ಎಸ್ ಫಕ್ರುದ್ದೀನ್,ವಿ.ವಿ ರಮೇಶನ್, ಕೆ.ವಿ ಕುಂಞರಾಮನ್, ಡಿ. ಸುಬ್ಬಣ ಆಳ್ವ, ಭಾರತಿ. ಎಸ್,ಸುಂದರಿ ಶೆಟ್ಟಿ, ಜಯಂತಿ ಕೆ. ಮಾತನಾಡಿದರು. ಕೆ.ಅರ್ ಜಯಾನಂದ ಸ್ವಾಗತಿಸಿದರು. ರಾಮಕೃಷ್ಣ ಕಡಂಬಾರ್ ಚೆಯಾರ್ಮೆನ್ ಹಾಗೂ ಕೆ.ಆರ್ ಜಯಾನಂದ ಕನ್ವೀನರ್ ಆಗಿರುವ ೫೦೧ ಮಂದಿಯ ಚುನಾವಣಾ ಸಮಿತಿ ಆಯ್ಕೆ ಮಾಡಲಾಯಿತು.