ಎಡರಂಗ ಸರಕಾರದ ಜನದ್ರೋಹ ಆರೋಪಿಸಿ ಐಕ್ಯರಂಗದಿಂದ ವಿಚಾರಣೆ ಸಭೆ ನಾಳೆ ಕುಂಬಳೆಯಲ್ಲಿ
ಕುಂಬಳೆ: ಎಡರಂಗ ಸರಕಾರದ ಕಪಟತನವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಹಾಗೂ ಅಧಃಪತನದಲ್ಲಿರುವ ರಾಜ್ಯದ ಚಿತ್ರವನ್ನು ಜನರ ಮುಂದಿಡಲು ಐಕ್ಯರಂಗದ ನೇತೃತ್ವದಲ್ಲಿ ರಾಜ್ಯದ ೧೪೦ ವಿಧಾನಸಭಾ ಮಂಡಲಗಳಲ್ಲೂ ನಡೆಸುವ ವಿಚಾರಣಾ ಸಭೆಗಳ ಅಂಗವಾಗಿ ಮಂಜೇಶ್ವರ ವಿಧಾನಸಭಾ ಮಂಡಲ ಮಟ್ಟದ ಸಭೆ ನಾಳೆ ಸಂಜೆ ೩ ಗಂಟೆಗೆ ಕುಂಬಳೆಯಲ್ಲಿ ನಡೆಯಲಿದೆ ಎಂದು ಐಕ್ಯರಂಗದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸರಕಾರದ ವಿರುದ್ಧ ಐಕ್ಯರಂಗದ ದೋಷಾರೋಪ ಪಟ್ಟಿ ಮಂಡನೆ, ದುರಾಡಳಿತದ ಸಂಕಷ್ಟ ಅನುಭವಿಸುವ ಜನರಿಗೆ ಮುಖ್ಯಮಂತ್ರಿ ಹಾಗೂ ಸಚಿವರ ಪ್ರತೀಕಾತಕವಾಗಿ ವಿಚಾರೆ ನಡೆಸುವುದು ಈ ಸಭೆಯಿಂದ ಉದ್ದೇಶಿಸುವುದಾಗಿ ಮುಖಂಡರು ಸ್ಪಷ್ಟಪಡಿಸಿದರು. ಮಾಜಿ ಸಚಿವ ಸಿ.ಪಿ. ಅಹಮ್ಮದಾಲಿ ಉದ್ಘಾಟಿಸುವರು. ಐಕ್ಯರಂಗದ ಮಂಡಲ ಆಧ್ಯಕ್ಷ ಅಸೀಸ್ ಮರಿಕ್ಕೆ ಅಧ್ಯಕ್ಷತೆ ವಹಿಸುವರು. ಸಂಚಾಲಕ ಮಂಜುನಾಥ ಆಳ್ವ, ಕೆ.ಪಿ. ಸಿಸಿ ಉಪಾಧ್ಯಕ್ಷ ವಿ.ಟಿ. ಬಲರಾಮ್, ಮುಸ್ಲಿಂ ಲೀಗ್ ರಾಜ್ಯ ಕಾರ್ಯದರ್ಶಿ ಕೆ.ಎಂ. ಶಾಜಿ ಮಾತನಾ ಡುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಎ.ಕೆ.ಎಂ. ಅಶ್ರಫ್, ಎನ್.ಎ ನೆಲ್ಲಿಕುನ್ನು ಸಹಿತ ಜಿಲ್ಲಾ ಮುಖಂಡರು ಭಾಗವಹಿಸುವರು. ಈ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಂಜೇಶ್ವರ ಮಂಡಲ ಯುಡಿಎಫ್ ಅಧ್ಯಕ್ಷ ಅಸೀಸ್ ಮರಿಕೆ, ಮಂಜುನಾಥ ಆಳ್ವ, ಎ.ಕೆ. ಆರೀಫ್, ಯು.ಕೆ. ಸೈಫುಲ್ಲ ತಂಙಳ್, ಬಿ.ಎನ್. ಮುಹಮ್ಮದಾಲಿ, ಲೋಕನಾಥ ಶೆಟ್ಟಿ, ರವಿ ಪೂಜಾರಿ ಭಾಗವಹಿಸುವರು.