ಎದುರ್ತೋಡು ಆಂಡ್ ನೇರ್ಚೆ ೨೯ರಂದು
ಕಾಸರಗೋಡು: ಮುತ್ತುಪೇಟ್ಟ ಡಾಕ್ಟರ್ ಶೇಕ್ ದಾವೂದುಲ್ ಹಕ್ಕೀಂ ವಲಿಯುಲ್ಲಾಹಿ ಇವರ ಹೆಸರಲ್ಲಿ ಎದುರ್ತೋಡು ಬೀವಿ ಮಂಜಿಲ್ನಲ್ಲಿ ೩೭ನೇ ವರ್ಷದ ಆಂಡ್ ನೇರ್ಚೆ (ವಾರ್ಷಿಕ ಹರಕೆ) ಈ ತಿಂಗಳ ೨೯ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರೆಸ್ ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಎದುರ್ತೋಡು ಖತೀಬ್ ಅಬ್ದುಲ್ ನಾಸಿರ್ ಯಮಾನಿ, ಇ. ಅಬ್ದುಲ್ಲ ಕುಂಞಿ ಮೊದಲಾದವರು ತಿಳಿಸಿದ್ದಾರೆ.
ಕಾರ್ಯಕ್ರಮದಂಗವಾಗಿ ಎನ್ಪಿಎಂ ಸೈನುಲ್ ಅಬಿದೀನ್ ತಂಙಳ್ ಕುನ್ನುಂಗೈ, ಕೆ.ಎಸ್. ಅಲಿ ತಂಙಳ್ ಕುಂಬೋಳ್, ಮಂಗಳೂರು ಕಿಯಾರು ಖಾಝಿ ತ್ವಾಹಾ ಅಹಮ್ಮದ್ ಮೌಲವಿ, ಸಮಸ್ತ ಕೇಂದ್ರ ಮುಶಾವರ ಉಪಾಧ್ಯಕ್ಷ ಯು.ಎಂ. ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಎನ್.ಪಿ.ಎಂ. ಸಯಿದ್ ಫಳುಲುದ್ದೀನ್ ಹಾಮೀದ್ ಕೋಯಾಮ್ಮ ತಂಙಳ್ ಕುನ್ನುಂಗೈ, ತಂಙಳ್ ಉಸ್ತಾದ್ ಒಲಮುಂಡ, ಬಿ.ಕೆ. ಅಬ್ದುಲ್ಲ ಖಾದಿರ್ ಖಾಸಿಮಿ ಬಂಬ್ರಾಣ, ಅಬ್ದುಲ್ ಸಲಾಂ ದಾರಿಮಿ(ಆಲಂಪಾಡಿ ಖತೀಬ್), ಮತ್ತು ಎದುರ್ತೋಡು ಅಬ್ದುಲ್ ನಾಸಿರ್ ಯಮಾನಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುವರು.
ಕಾರ್ಯಕ್ರಮದಂಗವಾಗಿ ಅಂದು ಬೆಳಿಗ್ಗೆ ೧೦ ಗಂಟೆಗೆ ಯು.ಕೆ. ಮುಹಮ್ಮದ್ ಹನೀಫಾ ನಿಸಾಮಿ ಮೊಗ್ರಾಲ್ ಇವರಿಂದ ಧಾರ್ಮಿಕ ಕ್ಲಾಸ್ ನಡೆಯಲಿದೆ. ಮೌಲೀದ್ ಪಾರಾಣ, ಸಾಮೂಹಿಕ ಪ್ರಾರ್ಥನೆ ಹಾಗೂ ಅನ್ನದಾನ ಕಾರ್ಯಕ್ರಮ ನಡೆಯಲಿದೆಯೆಂದು ಪತ್ರಿಕಾಗೋಷ್ಠಿಯಲ್ಲಿ ಸಂಬಂಧಪಟ್ಟವರು ತಿಳಿಸಿದ್ದಾರೆ.