ಎದೆನೋವು : ಯುವಕ ಮೃತ್ಯು
ಕಾಸರಗೋಡು: ಎದೆನೋವು ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದ ಕೈದಕ್ಕಾಡ್ ನಿವಾಸಿಯಾದ ಯುವಕ ಮೃತಪಟ್ಟರು. ಪೊನ್ನಿಚ್ಚಿಪರಂ ಬಿಲ್ ಗೋಪಾಲನ್‌ರ ಪುತ್ರ ಪಿ.ಪಿ. ಜಿನೇಶ್ (44) ಮೃತಪಟ್ಟವರು. ಆದಿತ್ಯ ವಾರ ಸಂಜೆ ಇವರಿಗೆ ಎದೆನೋವು ಕಂಡು ಬಂದಿತ್ತು. ಆ ಹಿನ್ನೆಲೆಯಲ್ಲಿ ಚೆರ್ವತ್ತೂರಿನ ಖಾಸಗಿ ಆಸ್ಪತ್ರೆಗೂ, ಬಳಿಕ ಮಂಗಳೂರಿಗೂ ಕೊಂಡೊಯ್ಯ ಲಾಗಿತ್ತು. ಆದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಇಂದು ಬೆಳಿಗ್ಗೆ ಕೈದಕ್ಕಾಡ್‌ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಮೃತರು ತಂದೆ, ತಾಯಿ ಕೆ.ಪಿ. ರೋಹಿಣಿ, ಪತ್ನಿ ಮೇರಿ ಮೆಲ್ಡಾ, ಪುತ್ರ ಅಮನ್ ದೇಯಾನ್, ಸಹೋದರಿ ಜಿನ್ಸಿ, ಸಹೋದರ ಜಿಜಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.