ಎನ್ಎಸ್ಎಸ್ನಿಂದ ಪೆರ್ಲ ಪೇಟೆಯಲ್ಲಿ ಮಿನಿ ಗಾರ್ಡನ್ ನಿರ್ಮಾಣ
ಪೆರ್ಲ: ಕಾಸರಗೋಡು ಜಿಲ್ಲಾ ಶುಚಿತ್ವ ಮಿಷನ್ ಮತ್ತು ಕ್ರಿಕೇಟರ್ಸ್ ಕ್ಲಬ್ ಎಣ್ಮಕಜೆ, ಎಣ್ಮಕಜೆ ಪಂಚಾಯತ್, ನಾಲಂದ ಕಲಾ ಮತ್ತು ವಿಜ್ಞಾನ ಕಾಲೇಜು ಎಂಬಿವುಜಳ ಜಂಟಿ ಆಶ್ರಯದಲ್ಲಿ ಪೆರ್ಲ ಬಸ್ ನಿಲ್ದಾಣ ಸಮೀಪ ಮಿನಿ ಗಾರ್ಡನ್ ನಿರ್ಮಿಸಲಾಗಿದೆ. ಎನ್ಎಸ್ಎಸ್ ಘಟಕ ಸಂಖ್ಯೆ ೪೯ ಇದರ ಸ್ನೇಹರಾಮ ಕಾರ್ಯಕ್ರಮ ದಂಗವಾಗಿ ಗಾರ್ಡನ್ ನಿರ್ಮಿಸ ಲಾಗಿದ್ದು, ನಿನ್ನೆ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್. ಉದ್ಘಾಟಿಸಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್ ಅಧ್ಯಕ್ಷತೆ ವಹಿಸಿದರು. ಯೋಜನಾ ಸಮಿತಿ ಉಪಾಧ್ಯಕ್ಷೆ ಆಯಿಶಾ ಎ., ಶುಚಿತ್ವ ಮಿಷನ್ನ ಸುಗಂಧಿ, ಪ್ರಾಂಶುಪಾಲ ಶಂಕರ ಕೆ., ವೇಣುಗೋಪಾಲ್, ರಾಮಕೃಷ್ಣ ರೈ ಕುದ್ವ ಉಪಸ್ಥಿತರಿದ್ದರು. ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಕಾವ್ಯಚಂದ್ರನ್ ಸ್ವಾಗತಿಸಿ, ಕಾರ್ಯದರ್ಶಿ ಹರ್ಷಿತ ವಂದಿಸಿದರು.