ಎನ್‌ಎಸ್‌ಎಸ್‌ನ ‘ಸ್ನೇಹಾರಾಮಂ’ ವಿಶ್ರಾಂತಿಕೇಂದ್ರ ಸಜ್ಜು

ಎಡನೀರು: ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ಎನ್‌ಎಸ್‌ಎಸ್ ವಿದ್ಯಾರ್ಥಿ ಗಳು ಸಪ್ತದಿನ ಸಹವಾಸ ಕ್ಯಾಂಪ್‌ನ ಅಂಗವಾಗಿ ಚೇಡಿಕ್ಕಾನ ಬಸ್ ನಿಲ್ದಾಣ ಬಳಿಯಲ್ಲಿ ನಿರ್ಮಿಸುವ ‘ಸ್ನೇಹಾರಾಮಂ’ ಬೀದಿ ಬದಿ ವಿಶ್ರಮಕೇಂದ್ರ ನಿರ್ಮಾಣ ಅಂತಿಮ ಹಂತದಲ್ಲಿದೆ. ಜ. ೧ರಂದು ಈ ಕೇಂದ್ರವನ್ನು ಬದಿಯಡ್ಕ ಪಂ.ಗೆ ಹಸ್ತಾಂತರಿಸಲಾಗುವುದು.  ಪರಿಸರ ಸೌಹಾರ್ದವಾಗಿ ನಿರ್ಮಿಸುವ ಈ ಕೇಂದ್ರದ ಕೋ-ಆರ್ಡಿನೇಟರ್ ಶ್ರೀಜಾರ ಆಶಯವನ್ನು ತಂಡದ ನಾಯಕರಾದ ಶ್ರದ್ಧಾ, ವೈಶಾಕ್, ಅಖಿಲ, ಅಕ್ಷತ್, ನಿಯಾ, ಶಿವರ ಮೊದಲಾದವರು ಇದರ ವಿನ್ಯಾಸ ರೂಪಿಸಿದ್ದಾರೆ. ಬಿದಿರು, ಕಂಗು,  ತೆಂಗಿನ ಮಡಲು, ಮುಳಿಹುಲ್ಲು ಮೊದಲಾದವುಗಳನ್ನು ಉಪಯೋ ಗಿಸಿ ಈ ಕೇಂದ್ರ ನಿರ್ಮಿಸಲಾಗಿದೆ. ತಂಡಕ್ಕೆ ಮನೋಹರನ್, ಡಾ ಜಿ.ಕೆ.ಯೋಗೇಶ್, ಐ.ಕೆ. ವಾಸುದೇ ವನ್, ಪ್ರವೀಣ್ ಕುಮಾರ್, ರೇಷ್ಮ, ಸುನಿತ, ಕೃಷ್ಣ ಆಳ್ವ, ದೀಪ, ಶ್ರೀಕಲಾ ನೇತೃತ್ವ ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page