ಎನ್‌ಜಿಒ ಸಂಘ್ ರಾಜ್ಯ ಸಮ್ಮೇಳನ ಆರಂಭ

ಕಾಸರಗೋಡು: ಕೇರಳ ಎನ್‌ಜಿಒ ಸಂಘ್ನ ರಾಜ್ಯ ಸಮ್ಮೇಳನ ಕಾಸರಗೋಡು ಮುನಿಸಿಪಲ್ ಟೌನ್ಹಾಲ್ನಲ್ಲಿ ಇಂದು ಬೆಳಿಗ್ಗೆ ಧ್ವಜಾರೋಹ ಣದೊಂದಿಗೆ ಆರಂಭಗೊ0ಡಿತು. ಮಧ್ಯಾಹ್ನ 12 ಗಂಟೆಗೆ ಬೀಳ್ಕೊ ಡುಗೆ, ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಬಿಎಂಎಸ್ ರಾಜ್ಯ ಅಧ್ಯಕ್ಷ ಶಿವಜಿ ಸುದರ್ಶನನ್ ಉದ್ಘಾಟಿಸುವರು. ಅಪರಾಹ್ನ 2 ಗಂಟೆಗೆ ಸಾಂಸ್ಕೃತಿಕ ಸಮ್ಮೇಳನವನ್ನು ಆರ್ಎಸ್ಎಸ್ ಬೌದ್ಧಿಕ್ ಪ್ರಮುಖ್ ಕೆ.ಪಿ. ರಾಧಾಕೃಷ್ಣನ್ ಉದ್ಘಾಟಿಸುವರು. ಸಂಜೆ 4ಕ್ಕೆ ಮೆರವಣಿಗೆ, 5ಕ್ಕೆ ಸಾರ್ವಜನಿಕ ಸಮ್ಮೇಳನ ನಡೆಯಲಿದೆ. ಆರ್.ಆರ್.ಕೆ.ಎಂ.ಎಸ್. ರಾಷ್ಟ್ರೀಯ ಕಾರ್ಯದರ್ಶಿ ಎಸ್.ಕೆ. ಜಯಕುಮಾರ್ ಉದ್ಘಾಟಿಸುವರು. ರಾತ್ರಿ 7.30ಕ್ಕೆ ಕಲಾಸಂಧ್ಯಾ ನಡೆಯಲಿದೆ. ನಾಳೆ ಬೆಳಿಗ್ಗೆ 8.30ಕ್ಕೆ ರಾಜ್ಯ ಕೌನ್ಸಿಲ್ ಸಭೆ ನಡೆಯಲಿದ್ದು ಆರ್.ಆರ್.ಕೆ.ಎಂ.ಎಸ್. ರಾಷ್ಟ್ರೀಯ ಉಪಾಧ್ಯಕ್ಷ ಪಿ. ಸುನಿಲ್ ಕುಮಾರ್ ಉದ್ಘಾಟಿ ಸುವರು. 11.30ಕ್ಕೆ ನಡೆಯುವ ಸಮ್ಮೇಳನವನ್ನು ಕೇಂದ್ರ ಸಚಿವ ಜೋರ್ಜ್ ಕುರ್ಯನ್ ಉದ್ಘಾಟಿಸುವರು. ಹಲವರು ಗಣ್ಯರು ಭಾಗವಹಿಸುವರು.

RELATED NEWS

You cannot copy contents of this page