ಎನ್ಡಿಎ ಕಾರ್ಯಕರ್ತರ ಸಮಾವೇಶ 29ರಂದು
ಉಪ್ಪಳ: ಕಾಸರಗೋಡು ಲೋಕ ಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಇವರ ಗೆಲುವಿ ಗೋಸ್ಕರ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎನ್ಡಿಎ ಒಕ್ಕೂಟದ ಕಾರ್ಯಕರ್ತರ ಸಮಾವೇಶ ಈ ತಿಂಗಳ 29ರಂದು ಸಂಜೆ 3 ಗಂಟೆಗೆ ಕೈಕಂಬದ ಪಂಚಮಿ ಪ್ಲಾಜಾ ಸಭಾಂಗಣ ದಲ್ಲಿ ನಡೆಯಲಿದೆ. ಎನ್ಡಿಎ ಕಾಸರ ಗೋಡು ಲೋಕಸಭಾ ಚುನಾವಣಾ ಸಮಿತಿ ಸಂಚಾಲಕ ನ್ಯಾಯವಾದಿ ಎಂ. ನಾರಾಯಣ ಭಟ್ ಉದ್ಘಾಟಿಸುವರು. ಬಿಜೆಪಿ ನೇಶನಲ್ ಕೌನ್ಸಿಲ್ ಸದಸ್ಯೆ ಪ್ರಮೀಳಾ ಸಿ. ನಾಯ್ಕ್ ಭಾಗವಹಿಸು ವರು. ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂ ದು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಸುಧಾಮ ಗೋಸಾಡ ವಿನಂತಿಸಿದ್ದಾರೆ.