ಎನ್‌ಡಿಎ ಸಭೆಗೆ ತಡೆಯೊಡ್ಡಿದ್ದು ಪರಾಜಯ ಭೀತಿಯಿಂದ-ರವೀಶ ತಂತ್ರಿ
ಕಾಸರಗೋಡು: ತೃಕ್ಕರಿಪುರದ ಪಡನ್ನಕಡಪ್ಪುರದಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿಯವರ ಚುನಾವಣಾ ಪ್ರಚಾರಕ್ಕೆ ತಡೆಯೊ ಡ್ಡಿದ್ದು ಪರಾಜಯ ಭೀತಿಯಿಂದಾಗಿ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಹೇಳಿದ್ದಾರೆ.
ಸಿಪಿಎಂ ಶಕ್ತಿ ಕೇಂದ್ರಗಳಲ್ಲಿ ಪ್ರಜಾಸತ್ತಾ ತ್ಮಕ ಹಕ್ಕುಗಳ ಪ್ರತ್ಯಕ್ಷ ಧ್ವಂಸ ನಡೆಯುತ್ತಿದೆ. ಚುನಾವಣಾ ಸಮಯದಲ್ಲೂ ಕಾರ್ಯವೆಸ ಗಲು ಬಿಜೆಪಿ ಕಾರ್ಯಕರ್ತರಿಗೆ ಇಂತಹ ಕೇಂದ್ರಗಳನ್ನು ನಿಷೇಧಿಸಲಾಗುತ್ತಿದೆ. ತೃಕ್ಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆಯೂ ಎನ್‌ಡಿಎ ಅಭ್ಯರ್ಥಿಗಳು ಇದೇ ರೀತಿಯ ಸಮಾನ ದಾಳಿ ನಡೆದಿದೆ. ಆ ವೇಳೆ ಅಕ್ರಮಿಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲು ಮುಂದಾ ಗದಿರುವುದೇ ಅಂತಹ ಘಟನೆಗಳು ಮತ್ತೆ ಮರು ಕಳಿಸಲು ದಾರಿಮಾಡಿಕೊಟ್ಟಿದೆ. ಗೃಹಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಯವರು ತೃಕರಿಪುರ ಕ್ಷೇತ್ರದಲ್ಲಿ ಪರ್ಯಟನೆ ನಡೆಸುvತ್ತಿರುವ ವೇಳೆಯಲ್ಲೇ ಸಿಪಿಎಂ ಭದ್ರಕೋಟೆಯಲ್ಲಿ ಇಂತಹ ದಾಳಿ ನಡೆದಿರುವುದು ಅತ್ಯಂತ ಗಂಭೀರ ವಿಷಯವಾಗಿದೆ. ಎನ್‌ಡಿಎ ಕಾರ್ಯಕರ್ತರು ಸ್ವತಂತ್ರವಾಗಿ ಚುನಾವಣಾ ಪ್ರಚಾರ ನಡೆಸಲು ನಿರ್ಭಯ ವಾತಾವರಣ ನಿರ್ಮಿಸಿಕೊಡುವ ಹೊಣೆಗಾರಿಕೆ ಪೊಲೀಸ್ ಇಲಾಖೆಗೂ ಇದೆ ಎಂದೂ ತಂತ್ರಿ ಹೇಳಿದ್ದಾರೆ.