ಎನ್.ಡಿ.ಎ. ಕಾಸರಗೋಡು ಲೋಕಸಭಾ ಅಭ್ಯರ್ಥಿ ಅಶ್ವಿನಿ ಎಂ.ಎಲ್.ರವರಿಗೆ ಪಿತೃ ವಿಯೋಗ
ಮಂಜೇಶ್ವರ: ಬಿಜೆಪಿ ಮಹಿಳಾ ಮೋರ್ಚಾ ರಾಷ್ಟಿçÃಯ ಸಮಿತಿ ಸದಸ್ಯೆ, ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯೆ, ಎನ್.ಡಿ.ಎ ಕಾಸರಗೋಡು ಲೋಕಸಭಾ ಅಭ್ಯರ್ಥಿ ಯಾಗಿರುವ ಅಶ್ವಿನಿ. ಎಂ.ಎಲ್ ರವರ ತಂದೆ ಬೆಂಗಳೂರು ಮಾದನಾಯಕನ ಹಳ್ಳಿ ನಿವಾಸಿ ಲಕ್ಷ÷್ಮಣ್ ಎ.ಕುಂದರ್ [73] ನಿನ್ನೆ ಅಪರಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತ ಮಂಗಳೂರಿನ ಕದ್ರಿ ನಿವಾಸಿ ಯಾಗಿದ್ದ ಇವರು ಕಳೆದ 39 ವರ್ಷ ಗಳಿಂದ ಬೆಂಗಳೂರಿನ ಮಾದ ನಾಯಕನ ಹಳ್ಳಿಯಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದಾರೆ. ಅಲ್ಲಿ ಲಾರಿ ಮೆಕಾನಿಕ್ ಆಗಿದ್ದಾರೆ. ಮೃತರು ಪತ್ನಿ ರೇವತಿ, ಇತರ ಮಕ್ಕಳಾದ ಅರ್ಚನ, ಅನನ್ಯ, ಅಳಿಯಂದಿರಾದ ಶಶಿಧರ ಪಜ್ವ ಕೊಡ್ಲಮೊಗರು, ಪವನ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿ ದ್ದಾರೆ. ನಿಧನಕ್ಕೆ ಬಿಜೆಪಿ ಕುಂಬಳೆ, ಮಂಜೇಶ್ವರ ಮಂಡಲ ಸಮಿತಿ, ಬಿಜೆಪಿ ಮಂಜೇಶ್ವರ, ಮಂಗಲ್ಪಾಡಿ ಪಂಚಾ ಯತ್ ಸಮಿತಿ ಪದಾಧಿಕಾರಿಗಳು, ಕಾರ್ಯ ಕರ್ತರು ಸಂತಾಪ ಸೂಚಿಸಿದ್ದಾರೆ.