ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾದ ಯುವತಿ ಹೊಳೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಎರಡು ತಿಂಗಳ ಹಿಂದೆಯಷ್ಟೇ ವಿವಾಹಿತಳಾದ ಯುವತಿ ಹೊಳೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಉದುಮ ಕಾಪ್ಪಿಲ್ ಕೋಡಿ ರಸ್ತೆ ಪರಿಸರದ ನಿವಾಸಿ ಅಟೋ ರಿಕ್ಷಾ ಚಾಲಕ ಮುಹಮ್ಮದಲಿ-ಜುಬೈದಾ ದಂಪತಿ ಪುತ್ರಿ ವಿ.ಎಸ್. ತಫ್‌ಸೀಫಾ (೨೭) ಸಾವನ್ನಪ್ಪಿದ ನವವಧು. ಇವರು ನಿನ್ನೆ ಸಂಜೆ ಸುಮಾರು ೬.೩೦ರ ವೇಳೆ ಉದುಮ ಕಾಪ್ಪಿಲ್ ಹೊಳೆಯಲ್ಲಿ ಬಿದ್ದ ಸ್ಥಿತಿಯಲ್ಲಿ ಊರವರು ಪತ್ತೆಹಚ್ಚಿದ್ದಾರೆ. ತಕ್ಷಣ ಕಾಸರಗೋಡಿನ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ೨೦೨೩ ನವಂಬರ್ ನಲ್ಲಿ ತಫ್‌ಸೀಫಾ ಮವ್ವಾಲ್ ನಿವಾಸಿ ಸಮೀರ್ ಎಂಬವರನ್ನು ಮದುವೆ ಯಾಗಿದ್ದರು. ಮದುವೆಯಾದ ಕೆಲವು ದಿನಗಳ ನಂತರ ಆಕೆ ತವರು ಮನೆಗೆ ತೆರಳಿ ಅಲ್ಲೇ ಉಳಿದುಕೊಂಡಿದ್ದರು.
ಬೇಕಲ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿ ದ್ದಾರೆ. ತಹಶೀಲ್ದಾರ್‌ರ ನೇತೃತ್ವದಲ್ಲಿ ಶವಮಹಜರು ನಡೆಸಲಾಗುವುದು.
ಮೃತರು ಹೆತ್ತವರು ಮತ್ತು ಪತಿಯ ಹೊರತಾಗಿ ಸಹೋದರ-ಸಹೋದರಿಯರಾದ ತನ್ಸೀರ್, ಮುಹಾದ್, ತಾಹಿರಾ, ತಸ್ಸಿರಿಯಾ, ತಸ್ಸಲಿಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.