ಎರಡು ವಾರ ಹಿಂದೆ ಗಲ್ಫ್‌ನಿಂದ ಬಂದ ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಉಪ್ಪಳ: ಎರಡು ವಾರಗಳ ಹಿಂದೆಯಷ್ಟೇ ಗಲ್ಫ್‌ನಿಂದ ಊರಿಗೆ ಮರಳಿ ಬಂದ ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ತೂಮಿನಾಡು ಕುಚ್ಚಿಕ್ಕಾಡ್‌ನ ಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಕೆ.ಎಚ್. ಮೊಹಮ್ಮದ್ ಎಂಬವರ ಪುತ್ರ ಮೊಹಮ್ಮದ್ ಅನ್ಸಾರ್ (32) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ 10.30ರ ವೇಳೆ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೊಹಮ್ಮದ್ ಅನ್ಸಾರ್ ಪತ್ತೆಯಾಗಿದ್ದರೆನ್ನಲಾಗಿದೆ. ಕೂಡಲೇ ಮಂಗಲ್ಪಾಡಿಯ ಆಸ್ಪತ್ರೆಗೆ ತಲುಪಿಸಿ ದರೂ ಜೀವ ರಕ್ಷಿಸಲಾಗಲಿಲ್ಲ.
ಈ ಹಿಂದೆ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಬಳಿಕ ಐದು ತಿಂಗಳ ಹಿಂದೆ ಗಲ್ಫ್‌ಗೆ ತೆರಳಿದ್ದ ಇವರು ಎgಡು ವಾರಗಳ ಹಿಂದೆಯಷ್ಟೇ ಊರಿಗೆ ಮರಳಿದ್ದರು.
ಮೃತರು ತಂದೆ, ತಾಯಿ ಅವ್ವಮ್ಮ, ಪತ್ನಿ ನಿಸ್ವಾನ್, ಮಕ್ಕಳಾದ ಐಫ, ಅಫೀಫ, ಸಹೋದರರಾದ ಸಮೀರ್, ನಸೀರ್, ರಿಯಾಸ್ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.