ಎರಡೆಡೆಗಳಿಗೆ ಅಬಕಾರಿ ದಾಳಿ ಕರ್ನಾಟಕ ಮದ್ಯ ಪತ್ತೆ; ಸ್ಕೂಟರ್ ಕಸ್ಟಡಿಗೆ
ಕಾಸರಗೋಡು: ಅಬಕಾರಿ ತಂಡ ನಿನ್ನೆ ಎರಡೆಡೆಗಳಿಗೆ ದಾಳಿ ನಡೆಸಿ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಕಾಸರಗೋಡು ಕೂಡ್ಲು ಮನ್ನಿಪ್ಪಾಡಿಯಲ್ಲಿ ಕಾಸರಗೋಡು ಅಬಕಾರಿ ಕಮು ವಿಭಾಗ ಪ್ರಿವೆಂಟಿವ್ ಆಫೀಸರ್ ಸಿ.ಕೆ.ಎ. ಸುರೇಶ್‌ರ ನೇತೃತ್ವದ ತಂಡ ನಿನ್ನೆ ದಾಳಿ ನಡೆಸಿ ೧೮೦ ಎಂಎಲ್‌ನ ೧೭ ಪ್ಯಾಕೇಟ್ (೩.೦೬ ಲೀಟರ್) ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಆದರೆ ಆ ವೇಳೆ ಅದನ್ನು ಸಾಗಿಸುತ್ತಿದ್ದ ವ್ಯಕ್ತಿ ತಪ್ಪಿಸಿಕೊಂಡಿದ್ದಾನೆ. ಆದರೆ ಆತ ಚಲಾಯಿಸುತ್ತಿದ್ದ ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಗ್ರೇಡ್ ಪಿ.ಒ.ಗಳಾದ ಮನೀಶ್ ಕುಮಾರ್, ನೌಶಾದ್ ಮತ್ತು ನಸರುದ್ದೀನ್ ಎಂಬವರು ಒಳಗೊಂಡಿದ್ದಾರೆ. ಇದೇ ರೀತಿ ಬಂದಡ್ಕ ಕಣ್ಣಾಡಿತ್ತೋಡು ಎಂಬಲ್ಲಿ ಕಾಸರಗೋಡು ಅಬಕಾರಿ ಎಕ್ಸೈಸ್ ಸರ್ಕಲ್ ಇನ್ಸ್‌ಪೆಕ್ಟರ್ ಅಮಲ್‌ರಾಜ್‌ರ ನೇತೃತ್ವದ ತಂಡ ನಡೆಸಿದ ವಾಹನ ತಪಾಸಣೆ ವೇಳೆ ಬಸ್ಸೊಂದರಿಂದ ಐದು ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿದೆ. ಆದರೆ ಅದನ್ನು ಬಸ್ಸಿನಲ್ಲಿ ಸಾಗಿಸಿದ ವ್ಯಕ್ತಿ ಬಗ್ಗೆ ಅಬಕಾರಿ ತಂಡಕ್ಕೆ ಮಾಹಿತಿ ಲಭಿಸಿಲ್ಲ.