ಎರಡೆಡೆ ಅಬಕಾರಿ ದಾಳಿ: ಮದ್ಯ ವಶ
ಕಾಸರಗೋಡು: ಅಬಕಾರಿ ತಂಡ ಬಂದಡ್ಕ ಮತ್ತು ಬಾಡೂರು ಬಳಿ ನಡೆಸಿದ ಎರಡು ಕಾರ್ಯಾ ಚರಣೆಗಳಲ್ಲಾಗಿ ಮದ್ಯ ಹಾಗೂ ಹುಳಿರಸ ವಶಪಡಿಸಿಕೊಂಡಿದೆ. ಬಾಡೂರಿನಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ೫.೭೬ ಲೀಟರ್ ಕರ್ನಾಟಕ ಮದ್ಯ ಉಪೇ ಕ್ಷಿತ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕುಂಬಳೆ ಅಬಕಾರಿ ರೇಂಜ್ನ ಎಕ್ಸೈಸ್ ಇನ್ಸ್ಪೆಕ್ಟರ್ ಹರೀಶ್ ಕುಮಾರ್ ನೇತೃತ್ವದಲ್ಲಿ ಪ್ರಿವೆಂ ಟೀವ್ ಆಫೀಸರ್ ಮನಾಸ್ ಕೆ.ವಿ, ಸಿಇಒ ಗಳಾದ ಪ್ರಸನ್ನ ಕುಮಾರ್ ವಿ, ಇಂದಿರಾ ಕೆ ಎಂಬವರ ನೇತೃ ತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಈ ಬಗ್ಗೆ ಕುಂಬಳೆ ಎಕ್ಸೈಸ್ ರೇಂಜ್ ಕಚೇರಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೇ ರೀತಿ ಬಂ ದಡ್ಕದಲ್ಲಿ ಬಂದಡ್ಕ ಎಕ್ಸೈಸ್ ರೇಂಜ್ ಆಫೀಸ್ನ ಪ್ರಿವೆಂಟೀವ್ ಆಫೀ ಸರ್ ಜಯರಾಜನ್ ಟಿರ ನೇತೃತ್ವ ದಲ್ಲಿ ನಡೆಸಲಾದ ಅಬಕಾರಿ ಕಾರ್ಯಾಚರಣೆ ಯಲ್ಲಿ ೨೦ ಲೀಟರ್ ಹುಳಿರಸ (ವಾಶ್) ಪತ್ತೆಹಚ್ಚಿ ಪ್ರಕರಣ ದಾಖಲಿಸ ಲಾಗಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಸಿಇಒಗಳಾದ ಸಂಜಿತ್ ಟಿ.ವಿ, ಪ್ರದೀಶ್ ಕೆ ಎಂಬವರು ಒಳಗೊಂಡಿದ್ದರು.