ಎರಿಯಾಲ್ ನಿವಾಸಿ ದುಬಾಯಿಯಲ್ಲಿ ಕುಸಿದು ಬಿದ್ದು ಮೃತ್ಯು
ಕುಂಬಳೆ: ಎರಿಯಾಲ್ ಬಳಿಯ ಬುಳಾರ್‌ಕೋಡ್ ನಿವಾಸಿಯಾದ ಯುವಕ ದುಬಾಯಿಯಲ್ಲಿ ಕುಸಿದು ಬಿದ್ದು ಮೃತಪಟ್ಟರು. ದುಬಾಯಿಯ ಕರಾಮ ಹಲ್‌ಹತ್ತಾರ್ ಸೆಂಟರ್‌ನ ನೌಕರನಾದ ಮುಹಮ್ಮದ್ ರಿಶಾಲ್ (25) ಮೃತ ಪಟ್ಟ ಯುವಕ. ನಿನ್ನೆ ಸಂಜೆ ೭ ಗಂಟೆ ವೇಳೆ ವಾಸಸ್ಥಳದಲ್ಲಿ ಕುಸಿದು ಬಿದ್ದ ಮುಹಮ್ಮದ್ ರಿಶಾಲ್‌ರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಲಾಗಿದ್ದು, ಅಷ್ಟರೊಳಗೆ ನಿಧನ ಸಂಭವಿಸಿತ್ತು. ಮೃತದೇಹವನ್ನು ಊರಿಗೆ ತಲುಪಿಸಲಿರುವ ಕ್ರಮ ಆರಂಭಿಸಲಾಗಿದೆ. ಒಂದೂವರೆ ವರ್ಷ ಹಿಂದೆ ರಿಶಾಲ್ ಊರಿನಿಂದ ದುಬಾಯಿಗೆ ಹೋಗಿದ್ದರು. ಈ ತಿಂಗಳು ಊರಿಗೆ ಬರುವ ಸಿದ್ಧತೆಯಲ್ಲಿದ್ದಾಗಲೇ ನಿಧನ ಸಂಭವಿಸಿದೆ. ಶಾಫಿ- ಫಸೀಲಾ ದಂಪತಿಯ ಪುತ್ರನಾದ ಮೃತರು ಸಹೋದರ ರಿಫಾತ್,ಸಹೋದರಿ ರಿಶಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.